ಕ್ರಿಕೆಟ್‌ | ಅತಿಹೆಚ್ಚು ಗೆಲುವು ಸಾಧಿಸಿ ಟೀಮ್‌ ಇಂಡಿಯಾ ವಿಶ್ವದಾಖಲೆ

  • ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ಭಾರತ
  • ಸ್ಟೀವ್ ವಾ ನೇತೃತ್ವದ 2003ರ ಆಸ್ಟ್ರೇಲಿಯ ದಾಖಲೆ ಪತನ

ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದು ಬೀಗಿದ್ದ ರೋಹಿತ್‌ ಪಡೆ ವಿಶ್ವದಾಖಲೆ ಬರೆದಿದೆ.

ಕ್ರಿಕೆಟ್‌ ಇತಿಹಾಸದಲ್ಲೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಇದೀಗ ಟೀಮ್‌ ಇಂಡಿಯಾ ಪಾಲಾಗಿದೆ. ಈ ಹಾದಿಯಲ್ಲಿ ಬ್ಲೂ ಬಾಯ್ಸ್‌ ಆಸ್ಟ್ರೇಲಿಯ ತಂಡವನ್ನು ಹಿಂದಿಕ್ಕಿದ್ದಾರೆ.

Eedina App

ಪ್ರಸಕ್ತ ವರ್ಷದಲ್ಲಿ ಭಾರತ ಈವರೆಗೂ 39 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದರಲ್ಲಿ 24 ಟಿ20 ಪಂದ್ಯಗಳಲ್ಲಿನ ಗೆಲುವು ಸೇರಿದೆ. ಇದಕ್ಕೂ ಮೊದಲು 38 ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯ ತಂಡದ ಹೆಸರಿನಲ್ಲಿತ್ತು. 2003ರಲ್ಲಿ ಸ್ಟೀವ್ ವಾ ನೇತೃತ್ವದಲ್ಲಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ದಾಖಲೆ ನಿರ್ಮಿಸಿತ್ತು.

2022ರ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ‌ 2 ಟೆಸ್ಟ್‌ ಮತ್ತು 3 ಏಕದಿನ ಪಂದ್ಯಗಳು ಸೇರಿದಂತೆ ಸತತ ಐದು ಸೋಲಿನೊಂದಿಗೆ ರೋಹಿತ್ ಶರ್ಮಾ ಬಳಗ ಪಯಣ ಆರಂಭಿಸಿತ್ತು. ಆ ಬಳಿಕ 2 ಟೆಸ್ಟ್, 13 ಏಕದಿನ ಹಾಗೂ 24 ಟಿ20 ಪಂದ್ಯಗಳಲ್ಲಿ ಭಾರತದ ಗೆಲುವಿನ ಪಯಣ ಮುಂದುವರಿದಿದೆ. ಮತ್ತೊಂದೆಡೆ ಆಸ್ಟ್ರೇಲಿಯ, 2003ರಲ್ಲಿ ಆಡಿದ್ದ 38 ಏಕದಿನ ಪಂದ್ಯಗಳಲ್ಲಿ ವಿಶ್ವಕಪ್‌ ಟೂರ್ನಿಯ ಪಂದ್ಯಗಳು ಸೇರಿದಂತೆ 30 ಪಂದ್ಯಗಳಲ್ಲಿ ಸ್ಟೀವ್ ವಾ ಬಳಗ ಜಯಭೇರಿ ಬಾರಿಸಿತ್ತು. ಉಳಿದಂತೆ 8 ಟೆಸ್ಟ್‌ ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು.

AV Eye Hospital ad

ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಗೆಲುವು

39 - ಭಾರತ, 2022 (2 ಟೆಸ್ಟ್‌ಗಳು, 13 ಏಕದಿನ, 24 ಟಿ20)

38 – ಆಸ್ಟ್ರೇಲಿಯ, 2003 (8 ಟೆಸ್ಟ್‌ಗಳು, 30 ಏಕದಿನ)

2022 ಟೀಮ್‌ ಇಂಡಿಯಾದ ಈವರೆಗಿನ ಪಯಣ :

ಟೆಸ್ಟ್‌: ಒಟ್ಟು ಪಂದ್ಯ: 5, ಗೆಲುವು: 2, ಸೋಲು: 3

ಏಕದಿನ: ಒಟ್ಟು ಪಂದ್ಯ: 8, ಗೆಲುವು: 13, ಸೋಲು: 5

ಟಿ20ಐ: ಒಟ್ಟು ಪಂದ್ಯ: 32, ಗೆಲುವು: 24, ಸೋಲು: 8

ಕೊಹ್ಲಿ ʻಮಾಸ್ಟರ್‌ ಕ್ಲಾಸ್‌ʼ ಪ್ರದರ್ಶನದ ನೆರವಿನಿಂದ ಭಾನುವಾರ ನಡೆದಿದ್ದ ಮಹತ್ವದ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ 4 ವಿಕೆಟ್‌ಗಳ ಅಮೋಘ ಜಯ ದಾಖಲಿಸಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app