
- ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್ನಲ್ಲಿ 'ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್
- ಡೋರ್ನಾ ಸ್ಪೋರ್ಟ್ಸ್- ಫೇರ್ಸ್ಟ್ರೀಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಂದ
ಪ್ರತಿಷ್ಠಿತ ಮೋಟೊ ಜಿಪಿ ಚಾಂಪಿಯನ್ಷಿಪ್ ಮುಂದಿನ ವರ್ಷದಿಂದ ಭಾರತದಲ್ಲಿ ನಡೆಯುವ ಸಾಧ್ಯತೆಯಿದೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್ನಲ್ಲಿ 2023ರಲ್ಲಿ, 'ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್' ನಡೆಯುವುದು ಬಹುತೇಕ ಖಚಿತವಾಗಿದೆ.
ಮೋಟೊ ಜಿಪಿ ಚಾಂಪಿಯನ್ಷಿಪ್ ಆಯೋಜಕ ಸಂಸ್ಥೆ ಡೋರ್ನಾ ಸ್ಪೋರ್ಟ್ಸ್ನ ಮುಖ್ಯಸ್ಥ ಕಾರ್ಲೋಸ್ ಎಜ್ಪೆಲೆಟಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ಈ ಕುರಿತ ತಿಳುವಳಿಕೆ ಪತ್ರಕ್ಕೆ ಡೋರ್ನಾ ಸ್ಪೋರ್ಟ್ಸ್ ಮತ್ತು ಭಾರತದಲ್ಲಿ ಮೋಟೊ ಜಿಪಿ ಪ್ರವರ್ತಕರಾದ ಫೇರ್ಸ್ಟ್ರೀಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಹಿ ಹಾಕಿದೆ.
Talks are underway in order to bring #MotoGP to India in the near future 🇮🇳
— MotoGP™🏁 (@MotoGP) September 21, 2022
Full details below 👇 #MotoGP | 📰https://t.co/4r9SdUy5xo
ಈ ಸುದ್ದಿ ಓದಿದ್ದೀರಾ ? : ಪ್ರೊ ಕಬಡ್ಡಿ ಲೀಗ್| 9ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ
ಭಾರತದಲ್ಲಿ ಮೋಟೊ ಜಿಪಿ ಚಾಂಪಿಯನ್ಷಿಪ್ ನಡೆಯಲಿದೆ ಎಂಬುದು ಖಚಿತವಾದರೂ ಸಹ, ನಿರ್ದಿಷ್ಟ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ. ಮುಂದಿನ ವರ್ಷವೇ ಮೋಟೊ ಜಿಪಿ ಭಾರತದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಜಗತ್ತಿನಾದ್ಯಂತ ಇರುವ ಪ್ರಮುಖ ಬೈಕ್ ತಯಾರಿಕಾ ಕಂಪನಿಗಳು, ಅತ್ಯಂತ ನುರಿತ ಸವಾರರ ಮೂಲಕ ತಮ್ಮ ಪ್ರತಿಷ್ಠೆಯನ್ನು ಟ್ರ್ಯಾಕ್ನಲ್ಲಿ ನಿರೂಪಿಸುವ ಈ ರೋಮಾಂಚನಕಾರಿ ಬೈಕ್ಗಳ ಸ್ಪರ್ಧೆ ಭಾರತಕ್ಕೆ ಆಗಮಿಸುತ್ತಿರುವುದು ಅತ್ಯಂತ ಖುಷಿಯ ವಿಚಾರವೇ ಸರಿ.
ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್ನಲ್ಲಿ 2011ರಿಂದ 2013 ರವರೆಗೆ ಸತತ ಮೂರು ವರ್ಷಗಳ ಕಾಲ ಫಾರ್ಮುಲಾ-1 ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಆಯೋಜಿಸಲಾಗಿತ್ತು. ಆ ಬಳಿಕ ಕಾರು ತಯಾರಿಕಾ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ತೆರಿಗೆ ವಿಚಾರದಲ್ಲಿ ತಕರಾರು ಉಂಟಾದ ಪರಿಣಾಮ ಫಾರ್ಮುಲಾ-1 ಕ್ಯಾಲೆಂಡರ್ನಿಂದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಕೈಬಿಡಲಾಗಿತ್ತು.