ವಿದೇಶಿ ಲೀಗ್ ಪಂದ್ಯಗಳಲ್ಲಿ ಭಾಗವಹಿಸದಿರಲು ಎಂ ಎಸ್‌ ಧೋನಿಗೆ ಬಿಸಿಸಿಐ ಖಡಕ್‌ ಸೂಚನೆ

  • ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಧೋನಿ ಮೆಂಟರ್‌
  • ಐಪಿಎಲ್‌ನಿಂದ ನಿವೃತ್ತಿಯಾಗಲು ಸೂಚಿಸಿದ ಬಿಸಿಸಿಐ

ಮಹೇಂದ್ರ ಸಿಂಗ್‌ ಧೋನಿ, ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಏಕೈಕ ಟೀಂ ಇಂಡಿಯಾದ ನಾಯಕ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ ಧೋನಿ ಹವಾ ಇನ್ನೂ ಕಡಿಮೆಯಾಗಿಲ್ಲ. ಆದರೆ ಇದೇ ಎಂಎಸ್‌ ಧೋನಿಯ ಮೇಲೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇದೀಗ ಅಸಮಾಧಾನ ಹೊರಹಾಕಿದೆ.

ಐಪಿಎಲ್‌ ಯಶಸ್ಸಿನಿಂದ ಪ್ರೇರಣೆ ಪಡೆದು ವಿದೇಶಗಳಲ್ಲಿ ಆರಂಭವಾಗುತ್ತಿರುವ ಟಿ20 ಲೀಗ್‌ ಟೂರ್ನಿ ಆಯೋಜಕರು, ಭಾರತೀಯ ದಿಗ್ಗಜ ಕ್ರಿಕೆಟಿಗರ ಮೇಲೆ ಕಣ್ಣಿಟ್ಟಿದ್ದಾರೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಇಂಟರ್‌ನ್ಯಾಶನಲ್ ಟಿ20 ಲೀಗ್‌ ಮತ್ತು ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಟಿ20 ಲೀಗ್‌ ಟೂರ್ನಿಗಳಲ್ಲಿ ಎಂಎಸ್‌ ಧೋನಿ ಮೆಂಟರ್‌ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಗೆ ಬಿಸಿಸಿಐ ಕೆಂಡಾಮಂಡಲವಾಗಿದೆ.

Image

"ಟೀಮ್‌  ಇಂಡಿಯಾದ ಸದಸ್ಯ, ಬಿಸಿಸಿಐ ಗುತ್ತಿಗೆ ಹೊಂದಿರುವ, ದೇಶಿ ಟೂರ್ನಿಗಳಲ್ಲಿ ಆಡುವ ಅಥವಾ ನಿವೃತ್ತಿಯಾಗಿ ಬಿಸಿಸಿಐ ಆಯೋಜಿಸುವ ಪಂದ್ಯಾವಳಿಗಳಲ್ಲಿ ವಿವಿಧ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿರುವ ಯಾವುದೇ ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಆಟಗಾರ ಸೇರಿದಂತೆ ಯಾವುದೇ ಜವಾಬ್ದಾರಿ ಹೊರಲು ಸಾಧ್ಯವಿಲ್ಲ" ಎಂದು  ಬಿಸಿಸಿಐ ಸ್ಪಷ್ಟಪಡಿಸಿದೆ.

ಈ ಸುದ್ದಿ ಓದಿದ್ದೀರಾ ? : ಮುಂದಿನ ವರ್ಷದಿಂದ ಮಹಿಳಾ ಐಪಿಎಲ್‌ ಆರಂಭ

ಸಿಎಸ್‌ಎ ಟಿ20 ಲೀಗ್‌ನಲ್ಲಿ ಎಲ್ಲಾ ಆರು ತಂಡಗಳು ಕೂಡ ಐಪಿಎಲ್ ಫ್ರಾಂಚೈಸಿಯ ಮಾಲೀಕರ ಪಾಲಾಗಿವೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲೀಕತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ಮೆಂಟರ್‌ ಆಗಿ ಮಹೇಂದ್ರ ಸಿಂಗ್‌ ಧೋನಿ ನೇಮಕವಾಗುತ್ತಾರೆ ಎನ್ನಲಾಗಿತ್ತು. ಈ ಸುದ್ದಿ ಹೊರಬರುತ್ತಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ, ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಎಂಎಸ್‌ ಧೋನಿ ಭಾಗವಹಿಸುವುದಾದರೆ ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಭಾಗವಹಿಸಲೇಬೇಕಾದರೆ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗಬೇಕು ಎಂದು ನೇರವಾಗಿ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್