
- ಮೂರು ಪಂದ್ಯಗಳಲ್ಲಿ ಕೇವಲ 1 ಗೋಲು ಗಳಿಸಿದ ಕತಾರ್
- ಅಂತಿಮ 16ರ ಘಟ್ಟಕ್ಕೆ ಸೆನೆಗಲ್, ನೆದರ್ಲ್ಯಾಂಡ್ಸ್
ಆತಿಥ್ಯ ವಹಿಸಿಕೊಳ್ಳುವ ಮೂಲಕ ಅನುಕೂಲ ಪಡೆದು ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕತಾರ್, ಗ್ರೂಪ್ ಹಂತದ ಮೂರನೇ ಪಂದ್ಯದಲ್ಲೂ ಸೋಲಿಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿದೆ.
ಅಲ್ ಬೈತ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಎ ಗುಂಪಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ 2-0 ಗೋಲುಗಳ ಅಂತರದಲ್ಲಿ ಕತಾರ್ ತಂಡವನ್ನು ಮಣಿಸಿತು.
ಗುಂಪು ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಜಯ ಮತ್ತು 1 ಪಂದ್ಯಗಳಲ್ಲಿ ಡ್ರಾ ಸಾಧಿಸಿದ ನೆದರ್ಲ್ಯಾಂಡ್ಸ್, 7 ಅಂಕಗಳೊಂದಿಗೆ ಎ ಗುಂಪಿನ ಮೊದಲ ಸ್ಥಾನಿಯಾಗಿ ಅಂತಿಮ 16ರ ಘಟ್ಟ ಪ್ರವೇಶಿಸಿದೆ.
ಮಂಗಳವಾರ ಏಕಕಾಲದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಸೆನೆಗಲ್, ಇಕ್ವೆಡಾರ್ ತಂಡವನ್ನು 2-1 ಅಂತರದಲ್ಲಿ ಮಣಿಸಿದೆ. ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಆಫ್ರಿಕನ್ ಶಕ್ತಿಗಳ ನಡುವಿನ ಸೆಣಸಾಟವು ಅಭಿಮಾನಿಗಳಿಗೆ ರೋಚಕ ಅನುಭವ ನೀಡಿತ್ತು.
ಮೊದಲಾರ್ಧದ ಅಂತಿಮ ನಿಮಿಷದಲ್ಲಿ (44ನೇ ನಿಮಿಷ) ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಇಸ್ಮಾಯ್ಲಾ ಸರ್ರ್, ಸೆನೆಗಲ್ಗೆ ಮುನ್ನಡೆ ತಂದುಕೊಟ್ಟಿದ್ದರು. 67ನೇ ನಿಮಿಷದಲ್ಲಿ ಮೊಯಿಸೆಸ್ ಕೈಸೆಡೊ ಗೋಲಿನ ಮೂಲಕ ಇಕ್ವೆಡಾರ್ ಸಮಬಲ ಸಾಧಿಸಿತ್ತು. ಆದರೆ ಇದಾದ ಮೂರೇ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿದ ಕಾಲಿದೌ ಕೌಲಿಬಾಲಿ, ಸೆನೆಗಲ್ ತಂಡವನ್ನು ಅಂತಿಮ 16ರ ಘಟ್ಟಕ್ಕೆ ಕೊಂಡೊಯ್ದರು.
▪️ Senegal have won successive World Cup games for the very first time!
— talkSPORT (@talkSPORT) November 29, 2022
▪️ Qatar become the first host nation to lose all three of their World Cup group games...#QAT #SEN #FIFAWorldCup
3 ಪಂದ್ಯಗಳಿಂದ ಸೆನೆಗಲ್ 6 ಅಂಕ ಗಳಿಸಿದರೆ, ಇಕ್ವೆಡಾರ್ 4 ಅಂಕಗಳಿಸಿದೆ. ಕತಾರ್ ಖಾತೆ ತೆರೆಯುವಲ್ಲಿ ವಿಫಲವಾಯಿತು. ಗುಂಪು ಹಂತದಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ ಒಂದು ಗೋಲು ಗಳಿಸಿದ ಕತಾರ್, 7 ಗೋಲು ಬಿಟ್ಟುಕೊಡುವ ಮೂಲಕ ತೀವ್ರ ನಿರಾಸೆ ಅನುಭವಿಸಿದೆ.
Our #WorldCup journey continues! 🦁#NothingLikeOranje pic.twitter.com/wss3tReYIg
— OnsOranje (@OnsOranje) November 29, 2022
ಮಂಗಳವಾರ ತಡರಾತ್ರಿ ನಡೆಯುವ ಪಂದ್ಯಗಳ ವೇಳಾಪಟ್ಟಿ
- ಗ್ರೂಪ್ B | ವೇಲ್ಸ್ vs ಇಂಗ್ಲೆಂಡ್ | ಪಂದ್ಯ ಪ್ರಾರಂಭ; ಮಧ್ಯರಾತ್ರಿ 12.30 | ಅಹ್ಮದ್ ಬಿನ್ ಅಲಿ ಸ್ಟೇಡಿಯಂ
- ಗ್ರೂಪ್ B | ಇರಾನ್ vs ಅಮೆರಿಕ | ಪಂದ್ಯ ಪ್ರಾರಂಭ; ಮಧ್ಯರಾತ್ರಿ 12.30 | ಅಲ್ ತುಮಾಮ ಸ್ಟೇಡಿಯಂ