ಏಕದಿನ ಸರಣಿ | ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ 220 ರನ್‌ಗಳ ಸುಲಭದ ಗುರಿ

ODI Series | An easy target of 220 runs for New Zealand in a crucial match
  • ಅರ್ಧಶತಕವೇ ಟೀಮ್‌ ಇಂಡಿಯಾದ ಗರಿಷ್ಟ ಮೊತ್ತ
  • ಮತ್ತೆ ಕಳೆಪೆ ಆಟ ಪ್ರದರ್ಶಿಸಿದ ರಿಷಭ್ ಪಂತ್

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ  ಟೀಮ್ ಇಂಡಿಯಾ 10 ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ಸಾಲು, ಸಾಲು ವಿಕೆಟ್‌ ಕಳೆದುಕೊಂಡಿತ್ತು.

ಇನಿಂಗ್ಸ್‌ ಆರಂಭಿಸಿದ ನಾಯಕ ಧವನ್‌(28) ಶುಭಮನ್‌ ಗಿಲ್‌(13) ರನ್‌ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದ ಶ್ರೇಯಸ್ ಅಯ್ಯರ್ (49) ರನ್‌ಗಳಿಗೆ ಆಟ ನಿಲ್ಲಿಸಿ ಅರ್ಧಶತಕ ವಂಚತರಾದರು.

Eedina App

ರಿಷಭ್ ಪಂತ್ (10) ಮತ್ತೆ ಕಳಪೆ ಆಟ ಪ್ರದರ್ಶಿಸಿ, ಕ್ಯಾಚ್‌ ನೀಡಿದರು. ಇನ್ನೂ ಕುಸಿಯುತ್ತಿರುವ ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ (6) ಬೆಳಕು ನೀಡಲಿಲ್ಲ. ಅಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ (51) ಅವರ ಅರ್ಧಶತಕವೇ ಟೀಮ್‌ ಇಂಡಿಯಾಗೆ ಅಧಿಕ ಮೊತ್ತವಾಯಿತು.

AV Eye Hospital ad

ನ್ಯೂಜಿಲೆಂಡ್‌ ಪರ ಆಡಮ್ ಮಿಲ್ನೆ ಡೇರಿಲ್ ಮಿಚೆಲ್, ತಲಾ ಮೂರು ವಿಕೆಟ್‌ ಪಡೆದರೆ, ಟಿಮ್ ಸೌಥಿ ಎರಡು ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದಿದೆ. ಹೀಗಾಗಿ ಸಂಜು ಸ್ಯಾಮ್ಸನ್‌ಗೆ ನ್ಯೂಜಿಲಂಡ್‌ನಲ್ಲಿ ಅಂತಿಮ ಪಂದ್ಯದಲ್ಲಿಯೂ ಆಡುವ ಅವಕಾಶ ದೊರೆಯದೆ ನಿರಾಸೆ ಅನುಭವಿಸಿದ್ದಾರೆ.

ಈ ಸರಣಿಯಲ್ಲಿ ಮೊದಲ ಪಂದ್ಯವಷ್ಟೇ ಯಾವುದೇ ಅಡೆತಡೆ ಇಲ್ಲದೆ ನಡೆದಿದೆ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಸೋಲು ಅನುಭವಿಸಿತ್ತು.

ಈ ಸುದ್ದಿ ಓದಿದ್ದೀರಾ? ಫಿಫಾ ವಿಶ್ವಕಪ್‌ | ಮೂರನೇ ಪಂದ್ಯವನ್ನೂ ಸೋತು ಮಕಾಡೆ ಮಲಗಿದ ಆತಿಥೇಯ ಕತಾರ್!

ಬೌಲಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಟೀಮ್ ಇಂಡಿಯಾ ಸೋಲು ಕಂಡಿತ್ತು. ಬಳಿಕ ಎರಡನೇ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದ ಕಾರಣ ಫಲಿತಾಂಶವಿಲ್ಲದೆ ರದ್ದಾಗಿತ್ತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಧವನ್ ನೇತೃತ್ವದ ಟೀಮ್ ಇಂಡಿಯಾ ಪಡೆಗೆ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರವೇ ಇದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app