ಅಂದು ಐಸಿಸಿ ಅಂಪೈರ್‌, ಇಂದು ಮಾರ್ಕೆಟ್‌ನಲ್ಲಿ ಶೂ ವ್ಯಾಪಾರಿ

Umpire Asad Rauf
  • ಐಸಿಸಿ ಎಲೈಟ್‌ ಪಾನಲ್‌ನ ಅಂಪೈರ್‌ ಆಗಿದ್ದ ಅಸಾದ್‌ ರೌಫ್‌
  • ಲಾಹೋರ್‌ನ ಲಂಡಾ ಬಝಾರ್‌ನಲ್ಲಿ ಬಟ್ಟೆ ಮತ್ತು ಶೂ ಅಂಗಡಿ

ವೃತ್ತಿ ಜೀವನದ ಸ್ಥಾನಮಾನಗಳು ಯಾವ ಕ್ಷಣದಲ್ಲೂ ಬದಲಾಗಬಹುದು ಎಂಬುದಕ್ಕೆ ಅಸಾದ್‌ ರೌಫ್‌ ಉತ್ತಮ ಉದಾಹರಣೆಯಾಗಿದ್ದಾರೆ. ಒಂದು ಕಾಲದಲ್ಲಿ ಐಸಿಸಿ ಎಲೈಟ್‌ ಪಾನಲ್‌ನ ಅಂಪೈರ್‌ ಆಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಿರ್ವಹಿಸುತ್ತಿದ್ದ ಅಸಾದ್‌ ರೌಫ್‌, ಇದೀಗ ಪಾಕಿಸ್ತಾನದ  ಲಾಹೋರ್‌ನ ಲಂಡಾ ಬಝಾರ್‌ನಲ್ಲಿ ಬಟ್ಟೆ ಮತ್ತು ಶೂ ಅಂಗಡಿ ನಡೆಸುತ್ತಿದ್ದಾರೆ. ಇದೀಗ ಐಸಿಸಿ ಅಂಪೈರ್ ಶೂ ಅಂಗಡಿ ನಡೆಸುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವಕಪ್‌, ಐಪಿಎಲ್‌ ಸೇರಿದಂತೆ 2000ದಿಂದ 2013ರವರೆಗಿನ ಅವಧಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕರ್ತವ್ಯ ನಿರ್ವಹಿಸಿದ್ದ ರೌಫ್‌, ಈ ನಡುವೆ ಐಸಿಸಿ ಎಲೈಟ್‌ ಪ್ಯಾನೆಲ್‌ಗೆ ಭಡ್ತಿ ಪಡೆದಿದ್ದರು. 49 ಟೆಸ್ಟ್‌, 98 ಏಕದಿನ ಪಂದ್ಯಗಳು ಹಾಗೂ 23 ಟಿ20 ಪಂದ್ಯಗಳಲ್ಲಿ ಅಂಪೈರ್‌ ಆಗಿ ರೌಫ್‌ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಅಂಪೈರ್‌ಗಳ ಪಟ್ಟಿಯಲ್ಲಿ ಅಸದ್‌ ರೌಫ್ ಅಗ್ರ ಸ್ಥಾನದಲ್ಲಿದ್ದರು.

Eedina App
Umpire Asad Rauf

ಕೀರ್ತಿಯ ಉತ್ತುಂಗದಲ್ಲಿರುವಾಗಲೇ ಕಳಂಕ

ಅಂಪೈರ್‌ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದ ಅಸಾದ್‌ ರೌಫ್‌, ಐಪಿಎಎಲ್‌ ಪಂದ್ಯಗಳಲ್ಲೂ ಅಂಪೈರಿಂಗ್ ನಡೆಸಿದ್ದರು. 2013ರ ಐಪಿಎಲ್ ಟೂರ್ನಿಯ ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ರೌಫ್‌ ಹೆಸರು ಕೇಳಿ ಬಂದಿತ್ತು. ಬೆಟ್ಟಿಂಗ್‌ ಸಂಬಂಧ ಅಸದ್‌ ರೌಫ್‌ ಬುಕ್ಕಿಗಳ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐ ಐದು ವರ್ಷಗಳ ಕಾಲ ರೌಫ್‌ ಅವರನ್ನು ಅಮಾನತುಗೊಳಿಸಿತ್ತು.

AV Eye Hospital ad

ಇದರ ಬೆನ್ನಲ್ಲೇ ಲೈಂಗಿಕ ಪ್ರಕರಣವೊಂದರಲ್ಲಿ ಅಸಾದ್ ರೌಫ್ ಹೆಸರು ಕೇಳಿ ಬಂದಿತ್ತು. ತನ್ನನ್ನು  ಮದುವೆಯಾಗುವುದಾಗಿ ಭರವಸೆ ನೀಡಿ, ಈಗ ನನಗೆ ವಂಚಿಸಿದ್ದಾರೆ ಎಂದು ಮುಂಬೈನ ರೂಪದರ್ಶಿಯೊಬ್ಬರು ರೌಫ್ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನೂ ಮಾಡಿದ್ದರು. ಈ ಘಟನೆಗಳ ಬೆನ್ನಲ್ಲೇ ಅಂಪೈರಿಂಗ್ ವೃತ್ತಿಗೆ ರೌಫ್ ವಿದಾಯ ಹೇಳಿದ್ದರು.

ಇವೆಲ್ಲ ಘಟನೆಗಳು ನಡೆದು ಸುಮಾರು 10 ವರ್ಷಗಳೇ ಕಳೆದಿವೆ. ಆದರೆ ಇದೀಗ ಅಸಾದ್‌ ರೌಫ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನದ ಲಾಹೋರ್‌ನ ಲಂಡಾ ಬಝಾರ್‌ನಲ್ಲಿ ಬಟ್ಟೆ ಮತ್ತು ಶೂ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ 66 ವರ್ಷದ ಅಸಾದ್‌ ರೌಫ್‌ ಚಿತ್ರಗಳು ಇದೀಗ ವೈರಲ್‌ ಆಗಿದೆ.

ಈ ಸುದ್ದಿ ಓದಿದ್ದೀರಾ ? : 1983ರ ಚೊಚ್ಚಲ ವಿಶ್ವಕಪ್‌ ದಿಗ್ವಿಜಯಕ್ಕೆ 39ರ ಸಂಭ್ರಮ

ಪಾಕಿಸ್ತಾನ ವಾಹಿನಿಯೊಂದು ಈ ಕುರಿತು ಅಸಾದ್‌ ರೌಫ್‌ರನ್ನು ಮಾತನಾಡಿಸಿದ್ದು, ಈ ವೇಳೆ "ಸಿಬ್ಬಂದಿಗೆ ಸಹಾಯವಾಗಲಿ ಎಂದು ನಾನು ಅಂಗಡಿ ನಡೆಸುತ್ತಿದ್ದೇನೆ" ಎಂದಿದ್ದಾರೆ. "ನಾನು ಜೀವನದಲ್ಲಿ ಸಾಕಷ್ಟು ಹಣ ಗಳಿಸಿದ್ದೇನೆ. ಇದೀಗ ಈ ಮಾರುಕಟ್ಟೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದೇನೆ. ಇಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇನೆ. ಇದರಿಂದ ಅಂಗಡಿಯಲ್ಲಿರುವ ಸಿಬ್ಬಂದಿ ಜೊತೆಗೆ ಜನಸಾಮಾನ್ಯರಿಗೂ ಉಪಯೋಗವಾಗುತ್ತಿದೆ" ಎಂದು ರೌಫ್‌ ಹೇಳಿದ್ದರೆ. "ನಾನು ಈಗ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರ ಉಳಿದಿದ್ದೇನೆ. ನನ್ನ ಮೇಲಿನ ಆರೋಪಗಳನ್ನು ಈಗಲೂ ನಾನು ನಿರಾಕರಿಸುತ್ತೇನೆ" ಎಂದು ಐಸಿಸಿ ಎಲೈಟ್‌ ಪಾನಲ್‌ನ ಮಾಜಿ ಅಂಪೈರ್‌ ಸ್ಪಷ್ಟಪಡಿಸಿದ್ದಾರೆ.

ಮಾಜಿ ಕ್ರಿಕೆಟಿಗರೂ ಆಗಿರುವ ಅಸಾದ್ ರೌಫ್ ಪಾಕಿಸ್ತಾನ ದೇಶೀಯ ಕ್ರಿಕೆಟ್‌ನಲ್ಲಿ ಲಾಹೋರ್ ಪರ 71 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 3,423 ರನ್ ಮತ್ತು 40 ಲಿಸ್ಟ್ 'ಎ' ಪಂದ್ಯಗಳಿಂದ 611 ರನ್ ಗಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app