ಏಕದಿನ ರ್‍ಯಾಂಕಿಂಗ್‌ | ಆಸ್ಟ್ರೇಲಿಯ ವಿರುದ್ಧ ವೈಟ್‌ವಾಶ್‌; ಅಗ್ರಸ್ಥಾನ ಕಳೆದುಕೊಂಡ ಇಂಗ್ಲೆಂಡ್‌

One Day Ranking | England lost the top spot
  • ಆಸ್ಟ್ರೇಲಿಯ ಮತ್ತು ಭಾರತ ತಲಾ 112 ಅಂಕ ಹೊಂದಿದೆ
  • ಒಟ್ಟು ಅಂಕಗಳ ಆಧಾರದಲ್ಲಿ ಭಾರತ 3ನೇ ಸ್ಥಾನದಲ್ಲಿದೆ

ಕಳೆದ ಮಂಗಳವಾರ ಅಂತ್ಯಗೊಂಡ ಆಸ್ಟ್ರೇಲಿಯ ವಿರುದ್ಧದ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡ ಇಂಗ್ಲೆಂಡ್‌, ಇದೀಗ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಅಗ್ರಸ್ಥಾನವನ್ನು ಇಂಗ್ಲೆಂಡಿಗೆ ಬಿಟ್ಟುಕೊಟ್ಟಿದ್ದ ನ್ಯೂಝಿಲ್ಯಾಂಡ್‌ ಮತ್ತೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಹಾಲಿ ಏಕದಿನ ವಿಶ್ವ ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌, ಆಸ್ಟ್ರೇಲಿಯ ವಿರುದ್ಧದ ಸರಣಿಯ ಮೊದಲು 119 ಅಂಕ ಹೊಂದಿತ್ತು. ಇದೀಗ ಸರಣಿಯಲ್ಲಿ ವೈಟ್‌ವಾಶ್ ಆಗಿರುವ ಹಿನ್ನೆಲೆಯಲ್ಲಿ ಆರು ಅಂಕಗಳನ್ನು ಕಳೆದುಕೊಂಡಿದೆ.

ಆಸ್ಟ್ರೇಲಿಯ ಮತ್ತು ಭಾರತ ತಲಾ 112 ಅಂಕ ಹೊಂದಿದೆ. ಒಟ್ಟು ಅಂಕಗಳ ಆಧಾರದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ ನಾಲ್ಕನೇ ಸ್ಥಾನ ಪಡೆದಿದೆ.

ಈ ಸುದ್ದಿ ಓದಿದ್ದೀರಾ? ಏಕದಿನ ಕ್ರಿಕೆಟ್ ಸರಣಿ | ದಿಟ್ಟ ನಿರ್ಧಾರ ಕೈಗೊಳ್ಳುವೆ ಎಂದ ಕ್ಯಾಪ್ಟನ್ ಶಿಖರ್‌ ಧವನ್‌

ಕಳೆದ ಎರಡು ವರ್ಷಗಳಿಂದ ನ್ಯೂಝಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ನಡುವೆ  ಮೊದಲ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ನಡೆದಿತ್ತು. 2021ರ ಮೇ ತಿಂಗಳಲ್ಲಿ ಅಗ್ರಸ್ಥಾನಕ್ಕೇರಿದ್ದ ನ್ಯೂಝಿಲ್ಯಾಂಡ್‌, 2022ರ ಸೆಪ್ಟಂಬರ್‌ ತನಕ ಮೊದಲ ಸ್ಥಾನವನ್ನು ಅಲಂಕರಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180