ಒಂದು ನಿಮಿಷದ ಓದು | ಶೂಟಿಂಗ್ ವಿಶ್ವಕಪ್‌ನಲ್ಲಿ ಮತ್ತೆ ಎರಡು ಪದಕ ಗೆದ್ದ ಭಾರತ

ದಕ್ಷಿಣ ಕೊರಿಯದ ಚಾಂಗ್‌ವೊನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್‌ಗಳು ಮತ್ತೆರಡು ಪದಕಗಳನ್ನು ಗಳಿಸಿದ್ದಾರೆ.

ಭಾನುವಾರ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಅಂಜುಮ್ ಮೌನ್ಸಿಲ್ 402.9 ಅಂಕಗಳೊಂದಿಗೆ ಕಂಚು ತಮ್ಮದಾಗಿಸಿದರು. ಅವರು ಕಳೆದ ತಿಂಗಳು ನಡೆದ ಬಾಕು ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ಇದೇ ವೇಳೆ ಪುರುಷರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಸಂಜೀವ್ ರಜಪೂತ್, ಚೈನ್ ಸಿಂಗ್ ಹಾಗೂ ಐಶ್ವರಿ ಪ್ರತಾಪ್‌ ತೋಮ‌ ಅವರನ್ನೊಳಗೊಂಡ ತಂಡ ಬೆಳ್ಳಿ ಗೆದ್ದಿದೆ. ಭಾರತ ಶೂಟಿಂಗ್ ವಿಶ್ವಕಪ್‌ ಕೂಟದಲ್ಲಿ 4 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್