ಒಂದು ನಿಮಿಷದ ಓದು | ಪ್ಯಾರಾಸಿನ್ ಓಪನ್ ಪ್ರಶಸ್ತಿ ಗೆದ್ದ ಆರ್ ಪ್ರಜ್ಞಾನಂದ

ಭಾರತದ ಯುವ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಪ್ಯಾರಾಸಿನ್ ಓಪನ್ 'ಎ' ಚೆಸ್ ಟೂರ್ನಮೆಂಟ್ ಗೆದ್ದು ಬೀಗಿದ್ದಾರೆ.

16 ವರ್ಷದ ಪ್ರಜ್ಞಾನಂದ ಅಜೇಯರಾಗಿ ಉಳಿದಿದ್ದು, ಅರ್ಧ ಪಾಯಿಂಟ್‌ಗಳಿಂದ ಮೊದಲೇ ತಮ್ಮ ಆಟವನ್ನು ಮುಗಿಸಿದರು. ಮತ್ತೊಂದೆಡೆ ಅವರ ಪ್ರತಿಸ್ಪರ್ಧಿ ಅಲೆಕ್ಸಾಂಡರ್ ಪ್ರೆಡ್ಕೆ ಅವರು ಅಲಿಶರ್ ಸುಲೇಮೆನೋವ್ ಹಾಗೂ ಭಾರತದ ಎಎಲ್ ಮುತ್ತಯ್ಯ ಅವರಿಗಿಂತ ಮುಂದಿದ್ದು, 7.5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

ಹದಿಹರೆಯದ ಪ್ರಜ್ಞಾನಂದ ಜುಲೈ 28ರಿಂದ ಚೆನ್ನೈ ಬಳಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಬಲಿಷ್ಠ ಭಾರತ 'ಬಿ' ತಂಡದ ಭಾಗವಾಗಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್