
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ 9ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್ ತಂಡ ಸತತ ನಾಲ್ಕನೇ ಜಯ ದಾಖಲಿಸಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ ಪಲ್ಟನ್, 32-24 ಅಂಕಗಳ ಅಂತರದಿಂದ, ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿದೆ.
ಪುಣೇರಿ ಪಲ್ಟನ್ ರೈಡಿಂಗ್ನಲ್ಲಿ ಮಿಂಚಿದ ಅಸ್ಲಮ್ ಇನಾಮ್ದಾರ್ 11 ಮತ್ತು ಬೋನಸ್ ಮೂಲಕ 2 ಅಂಕಗಳನ್ನು ಗಳಿಸಿ ಮಿಂಚಿದರು. ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ ಒಟ್ಟು 7 ಅಂಕ ಗಳಿಸಿದರು. ರೈಡಿಂಗ್ನಲ್ಲಿ ಪುಣೇರಿ ಪಲ್ಟನ್ 19 ಅಂಕ ಗಳಿಸಿದರೆ, ಪಿಂಕ್ ಪ್ಯಾಂಥರ್ಸ್ 17 ಅಂಕ ಗಳಿಸಿತು.
ಮತ್ತೊಂದೆಡೆ, ಸತತ ಸೋಲಿನ ಸರಪಳಿಯಿಂದ ಹೊರಬಂದ ಹರ್ಯಾಣ ಸ್ಟೀಲರ್ಸ್, ಮಂಗಳವಾರದ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 43-24 ರಿಂದ ಜಯ ಸಾಧಿಸಿತು.
A 𝐛𝐡𝐚𝐚𝐫𝐢 win before homecoming 😉
— ProKabaddi (@ProKabaddi) October 25, 2022
Puneri Paltan end Jaipur Pink Panthers' 5-match winning streak with a 8-point victory 🔥#vivoProKabaddi #FantasticPanga #PUNvJPP pic.twitter.com/T8NjgOhuqM
ಈ ಸುದ್ದಿ ಓದಿದ್ದೀರಾ ? : ಜೊಹರ್ ಕಪ್ ಹಾಕಿ ಟೂರ್ನಿ | ಗೆಲುವಿನ ಲಯಕ್ಕೆ ಮರಳಿದ ಭಾರತ
ಮಂಗಳವಾರದ ಫಲಿತಾಂಶ
ಪಂದ್ಯ 38 | ಪುಣೇರಿ ಪಲ್ಟನ್ 32-24 ಜೈಪುರ ಪಿಂಕ್ ಪ್ಯಾಂಥರ್ಸ್
ಪಂದ್ಯ 39 | ತೆಲುಗು ಟೈಟಾನ್ಸ್ 24 – 43 ಹರಿಯಾಣ ಸ್ಟೀಲರ್ಸ್
ಬುಧವಾರದ ಪಂದ್ಯಗಳು
ಗುಜರಾತ್ ಜೈಂಟ್ಸ್ vs ಯು ಮುಂಬಾ
ದಬಾಂಗ್ ದಿಲ್ಲಿ vs ಬೆಂಗಾಲ್ ವಾರಿಯರ್ಸ್