ಪ್ರೊ ಕಬಡ್ಡಿ ಲೀಗ್‌ | ಹ್ಯಾಟ್ರಿಕ್‌ ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌

  • ನೀರಜ್‌ ನರ್ವಾಲ್‌ ಆಲ್‌ರೌಂಡ್‌ ಪ್ರದರ್ಶನ
  • 8 ನಿಮಿಷಗಳಲ್ಲಿ ಎರಡು ಬಾರಿ ಟೈಟನ್ಸ್‌ ಆಲೌಟ್‌

ಪುಣೆಯಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಎರಡನೇ ಚರಣದಲ್ಲಿ ಬೆಂಗಳೂರು ಬುಲ್ಸ್ ತಂಡ, ಹ್ಯಾಟ್ರಿಕ್‌ ಗೆಲುವು ದಾಖಲಿಸಿದೆ. ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 49- 38ರ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ಬುಲ್ಸ್‌, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಆಲ್‌ರೌಂಡ್‌ ಪ್ರದರ್ಶನ ನೀಡಿದ ನೀರಜ್‌ ನರ್ವಾಲ್‌ 13 ಮತ್ತು ರೈಡರ್‌ ಭರತ್‌ 17 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಮೊದಲಾರ್ಧದಲ್ಲಿ ಪ್ರತಿ ಅಂಕಕ್ಕಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದವು. ಹೀಗಾಗಿ 19- 18 ಅಂತರದಲ್ಲಿ ಟೈಟನ್ಸ್‌ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಬುಲ್ಸ್‌ ಆಬ್ಬರ ಜೊರಾಗಿತ್ತು. 8 ನಿಮಿಷಗಳಲ್ಲಿ ಟೈಟನ್ಸ್‌ ತಂಡವನ್ನು ಆಲೌಟ್‌ ಮಾಡುವಲ್ಲಿ ಬೆಂಗಳೂರು ಯಶಸ್ವಿಯಾಯಿತು.

Eedina App

9ನೇ ಆವೃತ್ತಿಯಲ್ಲಿ 2ನೇ ಬಾರಿಗೆ ಹ್ಯಾಟ್ರಿಕ್‌ ಗೆಲುವಿನ ಸಾಧನೆ ಮಾಡಿದ ಬುಲ್ಸ್‌, ಒಟ್ಟು 9ನೇ ಜಯದ ನಗೆ ಬೀರಿದೆ. ಟೂರ್ನಿಯಲ್ಲಿ ಈವರೆಗೂ 14 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ, 9 ಗೆಲುವು, 4 ಸೋಲು, 1 ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಒಟ್ಟು 51 ಅಂಕ ಗಳಿಸಿದೆ. ದ್ವಿತೀಯ ಸ್ಥಾನದಲ್ಲಿರುವ ಪುಣೇರಿ ಪಲ್ಟನ್‌, 14 ಪಂದ್ಯಗಳಿಂದ  49 ಅಂಕ ಗಳಿಸಿದೆ.

AV Eye Hospital ad

ಯು ಮುಂಬಾ- ಜೈಪುರ ಪಿಂಕ್ ಪ್ಯಾಂಥರ್ಸ್  ನಡುವೆ ನಡೆದ ಮೊದಲನೇ ಪಂದ್ಯದಲ್ಲಿ 32- 22 ಅಂಕಗಳ ಅಂತರದಲ್ಲಿ ಜೈಪುರ ಜಯದ ನಗೆ ಬೀರಿತು. ಲೀಗ್‌ನಲ್ಲಿ ಆಡಿರುವ 14 ಪಂದ್ಯಗಳಲ್ಲಿ 9 ಗೆಲುವು ದಾಖಲಿಸಿರುವ ಜೈಪುರ ಪಡೆ, 5 ಸೋಲು ಕಂಡಿದ್ದು 48 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಓದಿದ್ದೀರಾ ? : ಟಿ20 | ಟೀಮ್‌ ಇಂಡಿಯಾಗೆ ಮರಳಲಿದ್ದಾರೆ ಕೂಲ್‌ ಕ್ಯಾಪ್ಟನ್ ಎಂ ಎಸ್‌ ಧೋನಿ!

ಕಳೆದೆರಡು ಪಂದ್ಯಗಳಲ್ಲಿ ತಮಿಳ್ ತಲೈವಾಸ್ (40- 34) ಮತ್ತು ಹರ್ಯಾಣ ಸ್ಟೀಲರ್ಸ್ (36- 33) ವಿರುದ್ಧ ಬೆಂಗಳೂರು ಬುಲ್ಸ್ ಗೆಲುವು ಸಾಧಿಸಿತ್ತು. ಶುಕ್ರವಾರ ನಡೆಯುವ 15ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ಸವಾಲನ್ನು ಬುಲ್ಸ್‌ ಎದುರಿಸಲಿದೆ.

ಪ್ರೊ ಕಬಡ್ಡಿ ಲೀಗ್ 9ನ ಬುಧವಾರದ ಪಂದ್ಯಗಳು

ಪಾಟ್ನಾ ಪೈರೇಟ್ಸ್ vs ತಮಿಳ್ ತಲೈವಾಸ್

ದಬಾಂಗ್‌ ಡೆಲ್ಲಿ vs ಯುಪಿ ಯೋಧಾಸ್

ನಿಮಗೆ ಏನು ಅನ್ನಿಸ್ತು?
0 ವೋಟ್
eedina app