
- ಆರಂಭದಲ್ಲಿಯೇ 3- 1ರಲ್ಲಿ ಮುನ್ನಡೆ ಸಾಧಿಸಿದ ವಾರಿಯರ್ಸ್
- ಒಂದೆರಡು ದಾಳಿಗಳನ್ನು ನಡೆಸಿದ ವಿಕಾಸ್ ಕಂಡೋಲ
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು ಬೆಂಗಳೂರು ಬುಲ್ಸ್ ಅನ್ನು 42– 33ರಿಂದ ಸೋಲಿಸಿದೆ. ಮೊದಲರ್ಧದಲ್ಲಿಯೇ 14– 15ರಿಂದ ಬೆಂಗಳೂರು ತಂಡವು ಹಿನ್ನಡೆ ಅನುಭವಿಸಿತ್ತು. ವಿರಾಮದ ನಂತರ ಬೆಂಗಳೂರು ತಂಡವು ತಿರುಗೇಟು ನೀಡಲು ವಿಫಲವಾಗಿದೆ.
ಬೆಂಗಳೂರು ತಂಡದ ಭರತ್ (8) ಹಾಗೂ ವಿಕಾಶ್ ಖಂಡೋಲಾ (7) ಉತ್ತಮವಾಗಿ ಆಡಿದರೂ ಬೆಂಗಳೂರು ಗೆಲುವು ಸಾಧಿಸಲಿಲ್ಲ.
ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ 11 ಅಂಕ ಮತ್ತು ರೈಡರ್ ಶ್ರೀಕಾಂತ್ ಜಾಧವ್ 6 ಅಂಕಗಳ ಕೊಡುಗೆ ನೀಡಿದರು. ಗಿರೀಶ್ ಮಾರುತಿ ಎರ್ನಾಕ್ ಅದ್ಭುತ ಟ್ಯಾಕಲ್ಗಳಿಂದ ಬೆಂಗಾಲ್ ವಾರಿಯರ್ಸ್ ಆರಂಭದಲ್ಲಿಯೇ 3-1ರಲ್ಲಿ ಮುನ್ನಡೆ ಸಾಧಿಸಿದ್ದರು.
ಈ ಸುದ್ದಿ ಓದಿದ್ದೀರಾ ? ಟಿ 20 ವಿಶ್ವಕಪ್ | ಭಾರತದ ಪಂದ್ಯಗಳು ಐನಾಕ್ಸ್ನಲ್ಲಿ ನೇರ ಪ್ರಸಾರ
ಪಂದ್ಯದ ಕೊನೆಯ ಕೆಲವು ನಿಮಿಷಗಳಲ್ಲಿ ವಿಕಾಸ್ ಕಂಡೋಲ ಒಂದೆರಡು ದಾಳಿಗಳನ್ನು ನಡೆಸಿದರು. ಆದರೆ ಬೆಂಗಾಲ್ ವಾರಿಯರ್ಸ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಬೆಂಗಾಲ್ ವಾರಿಯರ್ಸ್ ತನ್ನ ಮುನ್ನಡೆಯನ್ನು ಉಳಿಸಿಕೊಂಡಿತು. ಕೊನೆಯಲ್ಲಿ ಕೇವಲ ಒಂದು ಅಂಕದ ಅಂತರದಿಂದ ವಿಜಯವನ್ನು ಸಾಧಿಸಿತು.
ಹ್ಯಾಟ್ರಿಕ್ ಸಾಧನೆ ಮಾಡಿದ ಡೆಲ್ಲಿ
ರೋಚಕವಾಗಿ ನಡೆದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಯುಪಿ ಯೋಧಾಸ್ ವಿರುದ್ಧ 44-42 ಅಂತರದಲ್ಲಿ ಜಯ ಸಾಧಿಸಿತ್ತು. ಆಡಿದ ಸತತ ಮೂರು ಪಂದ್ಯಗಳನ್ನೂ ಡೆಲ್ಲಿ ಜಯ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ನಾಯಕ ನವೀನ್ ಕುಮಾರ್ (13) ಹಾಗೂ ಮಂಜಿತ್ (12)ಅವರ ಸೂಪರ್ 10 ಸಾಧನೆಯ ನೆರವಿನಿಂದ ದಬಾಂಗ್ ಡೆಲ್ಲಿ 44-42 ಅಂತರದಲ್ಲಿ ಜಯ ಗಳಿಸಿತ್ತು. ಯುಪಿ ಯೋಧಾಸ್ ಪರ ಸುರಿಂದರ್ ಗಿಲ್ 21 ರೈಡಿಂಗ್ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಆದರೆ ಪ್ರಸ್ತತ ಋತುವಿನಲ್ಲಿ ಪಂದ್ಯವೊಂದರಲ್ಲೇ ಅತಿ ಹೆಚ್ಚು ರೈಡಿಂಗ್ ಅಂಕ ಗಳಿಸಿದ ಗೌರವಕ್ಕೆ ಸುರಿಂದರ್ ಗಿಲ್ ಪಾತ್ರರಾದರು.