
- ಫುಟ್ಬಾಲ್ ಜಗತ್ತಿನ ಮಾಂತ್ರಿಕ ಆಟಗಾರರ ಎಂದೇ ಖ್ಯಾತಿವೆತ್ತ ಲಿಯೋನೆಲ್ ಮೆಸ್ಸಿ
- ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿರುವ ಮೆಸ್ಸಿ
ಈ ಬಾರಿಯ ಕತಾರ್ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಅರ್ಜೆಂಟಿನಾ ತಂಡವು, ಟೂರ್ನಿಯ 3ನೇ ದಿನ ತನ್ನ ಮೊದಲ ಪಂದ್ಯವನ್ನಾಡಲು ಮೈದಾನಕ್ಕಿಳಿಯಲಿದೆ. ಲುಸೈಲ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಮೆಸ್ಸಿ ಪಡೆ ಸೌದಿ ಅರೆಬಿಯ ಸವಾಲನ್ನು ಎದುರಿಸಲಿದೆ.
ಫುಟ್ಬಾಲ್ ಜಗತ್ತಿನ ಮಾಂತ್ರಿಕ ಆಟಗಾರರ ಎಂದೇ ಖ್ಯಾತಿವೆತ್ತ ಲಿಯೋನೆಲ್ ಮೆಸ್ಸಿ, ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ವಿಶ್ವಕಪ್ ಟ್ರೋಫಿಗಾಗಿ ಅರ್ಜೆಂಟಿನಾ, ಕೊನೆಯ ಕ್ಷಣದವರೆಗೂ ಶತಾಯ-ಗತಾಯ ಹೋರಾಡುವುದು ನಿಶ್ಚಿತ.
ಅಬುಧಾಬಿಯಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ, ಆತಿಥೇಯ ಯುಎಇ ತಂಡವನ್ನು ಅರ್ಜೆಂಟಿನಾ 5- 0 ಗೋಲುಗಳ ಅಂತರದಲ್ಲಿ ಮಣಿಸಿತ್ತು. ಈ ಪಂದ್ಯದಲ್ಲಿ ಏಂಜಲ್ ಡಿ ಮರಿಯಾ 2, ಮೆಸ್ಸಿ, ಅಲ್ವಾರೆಝ್ ಹಾಗೂ ಜೋಕ್ವಿನ್ ಗೋಲು ಬಾರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕತಾರ್ | ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ 5 ತಂಡಗಳ ಬಲಾಬಲ ಹೇಗಿದೆ?
ಮತ್ತೊಂದೆಡೆ ರಿಯಾದ್ನಲ್ಲಿ ನಡೆದ ಪಂದ್ಯದಲ್ಲಿ ಸೌದಿ ಅರೆಬಿಯ, ಏಕೈಕ ಗೋಲುಗಳಿಂದ ಕ್ರೊಯೇಷಿಯಾ ತಂಡಕ್ಕೆ ಶರಣಾಗಿತ್ತು.
ಮಂಗಳವಾರ ಸಂಜೆ 6.30ಕ್ಕೆ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯುವ 2ನೇ ಪಂದ್ಯದಲ್ಲಿ ಡೆನ್ಮಾರ್ಕ್- ಟುನೀಶಿಯಾ ತಂಡಗಳು ಮುಖಾಮುಖಿ ಆಗಲಿವೆ.
ರಾತ್ರಿ 9.30ಕ್ಕೆ ನಡೆಯುವ 3ನೇ ಪಂದ್ಯದಲ್ಲಿ ಮೆಕ್ಸಿಕೊ- ಪೊಲೆಂಡ್ ಹಣಾಹಣಿ ಸ್ಟೇಡಿಯಂ 974ನಲ್ಲಿ ನಡೆಯಲಿದೆ