ಚೆನ್ನೈ | ಅಪಾರ್ಟ್‌ಮೆಂಟ್‌ ಬಳಿ ಯುವಕರೊಂದಿಗೆ ಕ್ರಿಕೆಟ್‌ ಆಡಿದ ಆರ್‌ ಅಶ್ವಿನ್‌

  • ಚೆನ್ನೈನಲ್ಲಿ ಗಲ್ಲಿ ಕ್ರಿಕೆಟ್‌ ಆಡಿದ ಟೀಮ್ ಇಂಡಿಯಾ ಸಿನ್ನರ್ 
  • ಅಶ್ವಿನ್‌ ಪೋಸ್ಟ್‌ ಮಾಡಿದ ವಿಡಿಯೋಗೆ ಭಾರೀ ಮೆಚ್ಚುಗೆ

ಟೀಮ್‌ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸೀಸ್‌ಗೆ ಶರಣಾಗಿರುವ ರೋಹಿತ್‌ ಬಳಗ, ನಾಳೆಯ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಆಸ್ಟೇಲಿಯಾ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಟೀಮ್‌ ಇಂಡಿಯಾದ ಅನುಭವಿ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌, ಚೆನ್ನೈ ನಗರದ ಅಪಾರ್ಟ್‌ಮೆಂಟ್‌ ಮುಂಬಾಗದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಯುವಕರಿಗೆ ಬೌಲಿಂಗ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

 
 
 
 
 
 
 
 
 
 
 
 
 
 
 

A post shared by Ashwin (@rashwin99)

ಈ ಸುದ್ದಿ ಓದಿದ್ದೀರಾ ? : ಲೇವರ್ ಕಪ್‌| ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ನಡಾಲ್‌ ಜೊತೆಗೂಡಿ ಆಡಲಿರುವ ರೋಜರ್‌ ಫೆಡರರ್

ಗಲ್ಲಿ ಕ್ರಿಕೆಟ್‌ನಲ್ಲಿ ಬೌಲ್‌ ಮಾಡಲು ಸಿದ್ಧನಾಗುತ್ತಿದ್ದ ಯುವಕನ ಬಳಿ ತೆರಳಿದ ಅಶ್ವಿನ್‌, 'ನಾನು ಒಂದು ಬಾಲ್‌ ಬೌಲಿಂಗ್ ಮಾಡಬಹುದಾ? ಎಂದು ಕೇಳುತ್ತಾರೆ. ಭಾರತ ತಂಡದ ಹೆಮ್ಮೆಯ ಆಲ್‌ರೌಂಡರ್‌ ನೋಡಿದ ಆ ಹುಡುಗ ಒಂದು ಕ್ಷಣ ತಬ್ಬಿಬ್ಬಾಗುತ್ತಾನೆ. ಸರ್‌! ನೀವಾ... ದಯವಿಟ್ಟು ಮಾಡಿ ಎಂದು ಚೆಂಡನ್ನು ಅಶ್ವಿನ್‌ ಕೈಗೆ ನೀಡುತ್ತಾರೆ. ಆರ್‌ ಅಶ್ವಿನ್‌ ಹಲವು ಎಸೆತಗಳನ್ನು ಬೌಲ್‌ ಮಾಡುತ್ತಾರೆ. ಈ ಈ ವಿಡಿಯೋವನ್ನು ಸ್ವತಃ ಅಶ್ವಿನ್‌ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.‌

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆರ್‌. ಆಶ್ವಿನ್‌, ಟೆಸ್ಟ್‌ ಕ್ರಿಕೆಟ್‌ ಚರಿತ್ರೆಯಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ

ನಿಮಗೆ ಏನು ಅನ್ನಿಸ್ತು?
0 ವೋಟ್