ಒಂದು ನಿಮಿಷದ ಸುದ್ದಿ | ಆರ್‌ಸಿಬಿ ʻಟ್ವೀಟ್‌ʼ ಎಡವಟ್ಟು

Cricket

ಭಾರತ- ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದ ವೇಳೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- ಆರ್‌ಸಿಬಿ ಫ್ರಾಂಚೈಸಿ ʻಟ್ವೀಟ್‌ʼ ಎಡವಟ್ಟು ಮಾಡಿಕೊಂಡಿದೆ. ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, ನಿಗದಿತ 36 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 225 ರನ್‌ ಗಳಿಸಿತ್ತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್‌ 98 ರನ್‌ಗಳಿಸಿ ಅಜೇಯರಾಗುಳಿದಿದ್ದರು.

ಆದರೆ ಈ ವೇಳೆ ಯಡವಟ್ಟು ಮಾಡಿಕೊಂಡ ಆರ್‌ಸಿಬಿ ಫ್ರಾಂಚೈಸಿ, "ಚೊಚ್ಚಲ ಶತಕ ದಾಖಲಿಸಿದ ಶುಭಮನ್‌ ಗಿಲ್‌ಗೆ ಅಭಿನಂದನೆಗಳು. ಮೂರಂಕಿಯ ಮೊತ್ತ ದಾಟಿದ ಸಮಯ ಇದಕ್ಕಿಂತ ಸೂಕ್ತವಾಗಿರಲು ಹೇಗೆ ಸಾಧ್ಯ" ಎಂದು ಟ್ವೀಟ್‌ ಮಾಡಿತ್ತು. ಆದರೆ ವಾಸ್ತವವಾಗಿ ಗಿಲ್‌ ಶತಕದಿಂದ ಇನ್ನೂ ಎರಡು ರನ್‌ ದೂರ ಉಳಿದಿದ್ದರು. ಬಳಿಕ ತನ್ನ ತಪ್ಪಿನ ಅರಿವಾಗುತ್ತಲೇ ಆರ್‌ಸಿಬಿ, ಟ್ವೀಟ್‌ ಅನ್ನು ಅಳಿಸಿಹಾಕಿದೆ. ಆದರೆ ಅಷ್ಟರಲ್ಲಾಗಲೇ ಆರ್‌ಸಿಬಿ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದೆ. 

Image
Cricket

ಇನ್ನು ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, ನಿಗಧಿತ 36 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 225 ರನ್‌ ಗಳಿಸಿತ್ತು. ಆದರೆ ಯಜುವೇಂದ್ರ ಚಹಾಲ್‌ ಸ್ಪಿನ್‌ ದಾಳಿಗೆ ಕುಸಿದ ವೆಸ್‌ ಇಂಡೀಸ್‌, 26 ಓವರ್‌ಗಳಲ್ಲಿ ಕೇವಲ 137 ರನ್‌ ಗಳಿಸುವಷ್ಟರಲ್ಲಿಯೇ ಸರ್ವಪತನ ಕಂಡಿತ್ತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ 3- 0 ದಾಖಲೆಯ ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್