ಮ್ಯಾಂಚೆಸ್ಟರ್‌ನಿಂದ ರೊನಾಲ್ಡೊ ನಿರ್ಗಮನ; ಕ್ಲಬ್ ಮಾರಾಟಕ್ಕೆ ಮುಂದಾದ ಮಾಲೀಕರು

 Ronaldo's departure from Manchester | Owners offering club for sale
  • ವಿವಾದದ ನಂತರ ರೊನಾಲ್ಡೊ ಜೊತೆಗಿನ ಒಪ್ಪಂದ ಕೊನೆಗೊಳಿಸಿದ ಸಂಸ್ಥೆ
  • ರೊನಾಲ್ಡೊ ನಿರ್ಗಮನ ಬೆನ್ನಲ್ಲೇ ಕ್ಲಬ್‌ ಮಾರಾಲು ಮುಂದಾದ ಮಾಲೀಕರು

ನಮ್ಮ ಕ್ಲಬ್ ಮಾರಲು ಸಿದ್ಧರಿದ್ದೇವೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಲೀಕರು ಮಂಗಳವಾರ ಹೇಳಿದ್ದಾರೆ. ಇದರೊಂದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾಗಿರುವ ಅಮೆರಿಕದ ಗ್ಲೇಜರ್ ಕುಟುಂಬದ 17 ವರ್ಷಗಳ ಅಧಿಪತ್ಯಕ್ಕೆ ತೆರೆ ಬೀಳುವ ಸಂಭವವಿದೆ.

ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್ ತೊರೆದಿದ್ದಾರೆ. ಇದರ ಬೆನ್ನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ಮಾರಾಟಕ್ಕಿರುವ ವಿಚಾರ ಬೆಳಕಿಗೆ ಬಂದಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ತಕ್ಷಣವೇ ಕ್ಲಬ್ ತೊರೆದಿದ್ದಾರೆ. ಪರಸ್ಪರ ಒಪ್ಪಂದದ ಮೂಲಕ ರೊನಾಲ್ಡೊ ಅವರೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಈ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್ ಪ್ರಕಟಿಸಿತ್ತು.

ಈ ಸುದ್ದಿ ಓದಿದ್ದೀರಾ? ಕತಾರ್ ವಿಶ್ವಕಪ್ | ಐತಿಹಾಸಿಕ ಗೆಲುವಿನ ಸಂಭ್ರಮಕ್ಕೆ ದೇಶಕ್ಕೇ ರಜೆ ಘೋಷಿಸಿದ ಸೌದಿ ದೊರೆ!

ಈ ಘೋಷಣೆಯ ಕೆಲವೇ ಗಂಟೆಗಳ ನಂತರ ಅಮೆರಿಕ ಮೂಲದ ಗ್ಲೇಝರ್ ಕುಟುಂಬವು ಕ್ಲಬ್ ಮಾರುವುದಾಗಿ ತಿಳಿಸಿದೆ.
"ಕ್ಲಬ್‌ಗೆ ಹೊಸ ಹೂಡಿಕೆ, ಮಾರಾಟ ಅಥವಾ ಕಂಪನಿ ಒಳಗೊಂಡ ಇತರ ವಹಿವಾಟುಗಳು ಸೇರಿದಂತೆ ಎಲ್ಲಾ ಕಾರ್ಯತಂತ್ರದ ಪರ್ಯಾಯಗಳನ್ನು ಮಂಡಳಿಯು ಪರಿಗಣಿಸುತ್ತದೆ" ಎಂದು ಯುನೈಟೆಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಲೆಕ್ಸ್ ಫರ್ಗುಸನ್ ಅವರು 2013ರಲ್ಲಿ ನಿರ್ವಾಹಕರಾಗಿ ನಿವೃತ್ತರಾದ ನಂತರ ಮ್ಯಾಂಚೆಸ್ಟರ್ ಕ್ಲಬ್‌ನ ಫಲಿತಾಂಶ ಒಂಬತ್ತು ವರ್ಷಗಳಿಂದ ಕುಸಿತದ ಹಾದಿಯಲ್ಲಿದೆ. 2012- 2013ರಲ್ಲಿ ಫರ್ಗುಸನ್ ಅವರ ನಿವೃತ್ತಿಯ ಬಳಿಕ ರೆಡ್ ಡೆವಿಲ್ಸ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದಿಲ್ಲ ಹಾಗೂ  2017ರಿಂದ ಯಾವುದೇ ಟ್ರೋಫಿಯನ್ನು ಗೆಲ್ಲಲು ವಿಫಲವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180