ಪಿ ವಿ ಸಿಂಧು ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌

  • ಸಿಂಗಾಪುರ್‌ ಓಪನ್ ಪ್ರಶಸ್ತಿ ಗೆದ್ದ ಪಿ ವಿ ಸಿಂಧು
  • ಚೀನಾ ಆಟಗಾರ್ತಿ ವಾಂಗ್ ಝಿ ವಿರುದ್ಧ ಗೆಲುವು

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಸಿಂಗಾಪುರ್‌ ಓಪನ್ ಫೈನಲ್‌ನಲ್ಲಿ ಚೀನಾದ ವಾಂಗ್ ಝಿ ಯಿ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್‌ ಆಗಿದ್ದಾರೆ.  ಚೀನಾದ ಆಟಗಾತಿ ವಾಂಗ್ ಝಿ ಯಿ ವಿರುದ್ಧ 21- 9 11- 21 21- 15 ರಲ್ಲಿ ಗೆಲುವು ದಾಖಲಿಸಿದರು. ಇದು ಪಿ ವಿ ಸಿಂಧುಗೆ ಮೊದಲ ಸಿಂಗಾಪುರ್‌ ಓಪನ್ ಪ್ರಶಸ್ತಿಯಾಗಿದೆ.

ಹೈದರಾಬಾದ್‌ನ 27 ವರ್ಷದ ಪಿ ವಿ ಸಿಂಧು ಈ ವರ್ಷದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿಯೂ ಕಂಚಿನ ಪದಕ ಗೆದ್ದಿದ್ದರು. ಈ ಗೆಲುವಿನೊಂದಿಗೆ ಭಾರತ ಬ್ಯಾಡ್ಮಿಂಟನ್ ತಂಡ ಮುಂಬರುವ ಕಾಮನ್ವೆಲ್ತ್‌ ಗೇಮ್ಸ್‌ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ.

ಎರಡು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆಯಾಗಿರುವ ಸಿಂಧು, ಜುಲೈ 28ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಗಾಪುರ್‌ ಓಪನ್ ಈ ವರ್ಷದ ಮೂರನೇ ಪ್ರಶಸ್ತಿಯಾಗಿದೆ.

ವಾಂಗ್ ಝಿ ಯಿ ಅವರನ್ನು ಸೋಲಿಸುವುದು ಪಿ ವಿ ಸಿಂಧು ಅವರಿಗೆ ಸುಲಭವಾಗಿರಲಿಲ್ಲ. ಮೂರು ಸೆಟ್‌ಗಳಲ್ಲಿ ನಡೆದ ಪಂದ್ಯದಲ್ಲಿ ಸಿಂಧು ಗೆಲುವಿನೊಂದಿಗೆ ಶುಭಾರಂಭ ಮಾಡಿದರೂ, ಇಬ್ಬರ ನಡುವೆ ಅದ್ಭುತ ಪೈಪೋಟಿ ನಡೆಯಿತು. ಆ ಬಳಿಕ ಎರಡನೇ ಸೆಟ್‌ನಲ್ಲಿ 11- 21ರಿಂದ ಸೋಲು ಕಂಡರು. ಮೂರನೇ ಸೆಟ್‌ನಲ್ಲಿ ಮತ್ತೆ ತಮ್ಮ ಆಟದ  ಮೂಲಕ ಸಿಂಧು ಮುನ್ನುಗ್ಗತೊಡಗಿದರು.

ಅಂತಿಮವಾಗಿ ಸಿಂಧು ಕೊನೆಯ ಸೆಟ್‌ನಲ್ಲಿ 21- 11 ಅಂಕಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಈ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್