ಒಂದು ನಿಮಿಷದ ಓದು | ಇಂದಿನಿಂದ ಸಿಂಗಾಪುರ ಸೂಪರ್ 500 ಬ್ಯಾಡ್ಮಿಂಟನ್

ಮಲೇಷ್ಯಾ ಮಾಸ್ಟರ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾದ ಭಾರತೀಯ ಶಟ್ಲರ್‌ಗಳು ಮಂಗಳವಾರದಿಂದ ಆರಂಭಗೊಳ್ಳಲಿರುವ ಸಿಂಗಾಪುರ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಬರ್ಮಿಂಗ್‌ಹ್ಯಾಮ್‌ ಕಾಮನ್ವೆನ್‌ವೆಲ್ತ್‌ ಕ್ರೀಡಾಕೂಟಕ್ಕೂ ಮುನ್ನ ನಡೆಯಲಿರುವ ಕೊನೆಯ ಟೂರ್ನಿ ಇದಾಗಿದ್ದು, ತಾರಾ ಶಟ್ಲರ್‌ಗಳಾದ ಪಿ ವಿ ಸಿಂಧು, ಕಿದಂಬಿ ಶ್ರೀಕಾಂತ್, ಎಚ್‌ ಎಸ್ ಪ್ರಣಯ್ ಮೇಲೆ ದೊಡ್ಡ ನಿರೀಕ್ಷೆ ಇದೆ.

ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಭಾರತದ ಅರ್ಜುನ್

ಭಾರತದ ಯುವ ಶೂಟ‌ರ್‌ ಅರ್ಜುನ್ ಬಾಬುತಾ ಚಾಂಗ್‌ವೊನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶಕಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.

ಸೋಮವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅರ್ಜುನ್‌ ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಅಮೆರಿಕದ ಲುಕಾಸ್ ಕೊಜೆನಿ ವಿರುದ್ಧ 17- 9 ಅಂಕಗಳಿಂದ ಜಯಗಳಿಸಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಆದರೆ ಅರ್ಜುನ್ ಜೊತೆ ಫೈನಲ್ ತಲುಪಿದ್ದ ಭಾರತದ ಪಾರ್ಥ್ ಮಖಿಜಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2016ರಲ್ಲಿ ಅರ್ಜುನ್ ಕಿರಿಯರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್