ಒಂದು ನಿಮಿಷದ ಓದು | 'ದಿ ಹಂಡ್ರೆಡ್ ಲೀಗ್​ ಟೂರ್ನಿ'ಯಲ್ಲಿ ಚೊಚ್ಚಲ ಶತಕ

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ `ದಿ ಹಂಡ್ರೆಡ್ ಲೀಗ್'​ ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಶತಕ ದಾಖಲಾಗಿದೆ. ಬರ್ಮಿಂಗ್​ಹ್ಯಾಮ್ ಫೀನೆಕ್ಸ್ ತಂಡದ 20ರ ಹರೆಯದ ಬ್ಯಾಟ್ಸ್​ಮನ್​ ವಿಲ್ ಸ್ಮೀಡ್ ಬ್ಯಾಟ್‌ನಿಂದ ಹೊಸ ದಾಖಲೆ ನಿರ್ಮಾಣವಾಗಿದೆ.

ಎಡ್ಜ್​ಬಾಸ್ಟನ್ ಮೈದಾನದಲ್ಲಿ ನಡೆದ ಬರ್ಮಿಂಗ್​ಹ್ಯಾಮ್  ಫೀನೆಕ್ಸ್ ಮತ್ತು ಸದರ್ನ್ ಬ್ರೇವ್ ತಂಡಗಳ ನಡುವಿನ ಪಂದ್ಯದಲ್ಲಿ ವಿಲ್ ಸ್ಮೀಡ್, ಬರ್ಮಿಂಗ್​ಹ್ಯಾಮ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕೇವಲ 100 ಎಸೆತಗಳ ಈ ಪಂದ್ಯದಲ್ಲಿ ವಿಲ್ ಸ್ಮೀಡ್ ಒಬ್ಬರೇ 50 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಸ್ಪೋಟಕ ಶತಕ ಸಿಡಿಸಿ ಮಿಂಚಿದರು. ಸ್ಮೀಡ್ ಅವರ 101 ರನ್​ಗಳ ನೆರವಿನಿಂದ ಬರ್ಮಿಂಗ್​ಹ್ಯಾಮ್ ತಂಡವು 4 ವಿಕೆಟ್ ನಷ್ಟಕ್ಕೆ 174 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸದರ್ನ್ ಬ್ರೇವ್ ತಂಡ ಕೇವಲ 85 ಎಸೆತಗಳಲ್ಲಿ 123 ರನ್​ಗಳಿಸಿ ಸರ್ವಪತನ ಕಂಡಿತು.

ನಿಮಗೆ ಏನು ಅನ್ನಿಸ್ತು?
0 ವೋಟ್