ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು | ನೆರವಿಗೆ ನಿಂತ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ

  • $ 45,000 ದೇಣಿಗೆ ನೀಡಿದ ಆಸ್ಟ್ರೇಲಿಯ ತಂಡ
  • 1.7 ಲಕ್ಷ ದುರ್ಬಲ ಮಕ್ಕಳಿಗೆ ಪೌಷ್ಟಿಕಯುತ ಆಹಾರ

ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾದ ನೆರೆವಿಗೆ ಆಸ್ಟ್ರೇಲಿಯಾ ತಂಡ ಧಾವಿಸಿದೆ. ಮಕ್ಕಳು ಮತ್ತು ಕುಟುಂಬಗಳನ್ನು ಬೆಂಬಲಿಸುವ ಉದ್ದೇಶಕ್ಕಾಗಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವು ತಮ್ಮ ಇತ್ತೀಚಿನ ಶ್ರೀಲಂಕಾ ಪ್ರವಾಸದಿಂದ ಬಂದ ತಮ್ಮ ಬಹುಮಾನದ ಹಣವನ್ನು ದಾನ ಮಾಡಿದೆ.

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ (ಯುನಿಸೆಫ್‌) ಆಸ್ಟ್ರೇಲಿಯಾದ ರಾಯಭಾರಿಯಾಗಿರುವ ಪ್ಯಾಟ್ ಕಮ್ಮಿನ್ಸ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ 45,000 ಅಮೆರಿಕ ಡಾಲರ್‍‌ ದೇಣಿಗೆ ನೀಡಿದೆ.

ಆಸ್ಟ್ರೇಲಿಯ ತಂಡವು ಈ ವರ್ಷದ ಜೂನ್-ಜುಲೈನಲ್ಲಿ ದ್ವೀಪ ರಾಷ್ಟ್ರಕ್ಕೆ ಕ್ರಿಕೆಟ್‌ ಸರಣಿ ಆಡಲು ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀಲಂಕಾ ಬಿಕ್ಕಟ್ಟನ್ನು ನೇರವಾಗಿ ನೋಡಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ನಿಂತಿರುವ ಉದ್ದನೆಯ ಸಾಲುಗಳು, ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಸುತ್ತಲೂ ಸಾವಿರಾರು ಶಾಂತಿಯುತ ಪ್ರತಿಭಟನಾಕಾರರ ಕೂಗುಗಳು ಪ್ರವಾಸದ ಉದ್ದಕ್ಕೂ ಆಸ್ಟ್ರೇಲಿಯಾ ತಂಡಕ್ಕೆ ಗೋಚರವಾಗಿವೆ.

ಈಸುದ್ದಿ ಓದಿದ್ದೀರಾ? ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು | ಮಕ್ಕಳಿಗೆ ಆಹಾರ ನೀಡಬೇಕೆ ಅಥವಾ ಕೊಲ್ಲಬೇಕೆ? ಪಾಕಿಸ್ತಾನ ಮಹಿಳೆ ಪ್ರಶ್ನೆ

ಆಸ್ಟ್ರೇಲಿಯಾ ಆಟಗಾರರು ನೀಡಿರುವ ಹಣದಿಂದ ಶ್ರೀಲಂಕಾದ 1.7 ಲಕ್ಷ ದುರ್ಬಲ ಮಕ್ಕಳಿಗೆ ಪೌಷ್ಟಿಕಯುತ ಆಹಾರ ನೀಡಬಹುದಾಗಿದೆ. ಆರೋಗ್ಯ ಸಂರಕ್ಷಣೆ, ಕುಡಿಯುವ ನೀರು, ಶಿಕ್ಷಣ ಹಾಗೂ ಮಾನಸಿಕ ಆರೋಗ್ಯವನ್ನು  ಬೆಂಬಲಿಸುವ ಉದ್ದೇಶದಿಂದ ಶ್ರೀಲಂಕಾಕ್ಕೆ ನೆರವಾಗಿದ್ದಾರೆ.

"ಶ್ರೀಲಂಕಾದವರ  ನಿತ್ಯದ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದು ನಮಗೆ ಬಹಳ ಸ್ಪಷ್ಟವಾಗಿತ್ತು.  ಅವರು ಅನುಭವಿಸುತ್ತಿರುವ ಕಷ್ಟ ಅರ್ಥವಾಯಿತು" ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಡಾಟ್ ಕಾಮ್‌ಗೆ ಕಮ್ಮಿನ್ಸ್ ತಿಳಿಸಿದ್ದಾರೆ.

ಸಾರ್ವಜನಿಕರು ತಂಡವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಈ ಹಿಂದೆಯೂ ಕೋವಿಡ್‌ ಸಮಯದಲ್ಲಿ ಭಾರತಕ್ಕೆ 50,000 ಅಮೆರಿಕ ಡಾಲರ್‍‌ ದೇಣಿಗೆ ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್