ಟಿ20 ಸರಣಿ | 65 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ

T20 Series | India won by 65 runs
  • ನ್ಯೂಜಿಲೆಂಡ್‌ಗೆ 192 ರನ್‌ಗಳ ಗುರಿ ನೀಡಿದ್ದ ಭಾರತ
  • ಭಾರತ ಪರ 4 ವಿಕೆಟ್‌ ಕಬಳಿಸಿದ ದೀಪಕ್ ಹೂಡಾ

ಭಾರತ- ನ್ಯೂಜಿಲೆಂಡ್ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 65 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ ನ್ಯೂಜಿಲೆಂಡ್‌ಗೆ 192 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತ್ತು. ಫಿನ್ ಅಲೆನ್ ಶೂನ್ಯಕ್ಕೆ ಔಟಾದರು. ಡೆವೊನ್ ಕಾನ್ವೇ (25) ಬೇಗನೇ ವಿಕೆಟ್ ಕಳೆದುಕೊಂಡಿದ್ದರು. ನಾಯಕ ಕೇನ್ ವಿಲಿಯಮ್ಸನ್ (61) ಅರ್ಧಶತಕ ಹೊರತುಪಡಿಸಿದರೆ ಯಾವ ಬ್ಯಾಟರ್‌ಗಳು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಅಂತಿಮವಾಗಿ ನ್ಯೂಜಿಲೆಂಡ್‌ 18.5 ಓವರ್‌ಗಳಲ್ಲಿ ತನ್ನಲ್ಲೆ ವಿಕೆಟ್‌ ಕಳೆದುಕೊಂಡು 126 ರನ್‌ ಗಳಿಸಿತ್ತು. ಭಾರತ ಪರ ದೀಪಕ್ ಹೂಡಾ 4 ವಿಕೆಟ್‌ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್ ತಲಾ ಎರಡು ವಿಕೆಟ್‌ ಪಡೆದರು. ಭುವನೇಶ್ವರ್ ಕುಮಾರ್ ಒಂದು ವಿಕೆಟ್‌ ಪಡೆದರು.

AV Eye Hospital ad

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತ್ತು.

ಆರಂಭಿಕರಾದ ಇಶಾನ್‌ ಕಿಶನ್‌ 36 ರನ್‌ ಗಳಿಸಿದರೆ ರಿಷಬ್‌ ಪಂತ್‌ 6 ಗಳಿಸಿ ಬೇಗನೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ ಭರ್ಜರಿ ಬ್ಯಾಟಿಂಗ್‌ ಮಾಡಿದರು. 51 ಬಾಲ್‌ಗಳಲ್ಲಿ 111 ರನ್‌ ಗಳಿಸಿ ಔಟ್‌ ಆಗದೆ ಉಳಿದರು.
ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತ್ತು. ನ್ಯೂಜಿಲೆಂಡ್‌ ಪರ ಟಿಮ್ ಸೌಥಿ 4 ಓವರ್‌ ಬೌಲಿಂಗ್‌ ಮಾಡಿ 3 ವಿಕೆಟ್‌ ಪಡೆದರು.

ನವೆಂಬರ್‌ 22, ಮಂಗಳವಾರ ಮೂರನೇ ಪಂದ್ಯ ನಡೆಯಲಿದೆ

ನಿಮಗೆ ಏನು ಅನ್ನಿಸ್ತು?
0 ವೋಟ್
eedina app