ಟಿ20 ಸರಣಿ | ಸಿರಾಜ್ ಬೌಲಿಂಗ್‌ಗೆ ತತ್ತರಿಸಿದ ನ್ಯೂಜಿಲ್ಯಾಂಡ್‌; ಭಾರತದ ಗೆಲುವಿಗೆ 161 ರನ್‌ಗಳ ಗುರಿ

Siraj
  • ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಆಕ್ರಮಣಕಾರಿ ಬೌಲಿಂಗ್‌ ಪ್ರದರ್ಶನ
  • ನ್ಯೂಜಿಲ್ಯಾಂಡ್‌ಗೆ ಚೇತರಿಕೆ ನೀಡಿದ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಫಿಲಿಪ್ಸ್

ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಕೀವಿಸ್‌ ಪಡೆ ಭಾರತಕ್ಕೆ 161 ರನ್‌ಗಳ ಗುರಿ ನೀಡಿದೆ.

ನೇಪಿಯರ್‌ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. 
ಆರಂಭದಲ್ಲೇ ಪಿನ್‌ ಆಲೆನ್‌ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮಾರ್ಕ್ ಚಾಪ್ಮನ್ ಆಟ 12 ರನ್‌ಗಳಿಗೆ ಮುಗಿದು ಹೋಗಿತ್ತು.

Eedina App

44 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಬ್ಯಾಟರ್‌ ಡೆವೊನ್ ಕಾನ್ವೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಫಿಲಿಪ್ಸ್ ಚೇತರಿಕೆ ನೀಡಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜೊತೆಯಾಟವಾಡಿತ್ತು.

ಭಾರತೀಯ ಬೌಲರ್‌ಗಳನ್ನು ದಂಡಿಸಿದ ಗ್ಲೆನ್ ಫಿಲಿಪ್ಸ್ ಮೂರು ಸಿಕ್ಸ್‌ ಐದು ಪೋರ್‌ ಸಹಿತ 32 ಬಾಲ್‌ಗಳಲ್ಲಿ ಅರ್ಧಶತಕ ದಾಲಿಸಿದರು. ಉತ್ತಮವಾಗಿ ಆಡವಾಡುತ್ತಿದ್ದ ಫಿಲಿಪ್ಸ್ ಅವರು ಸಿರಾಜ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಆರಂಭಿಕ ಬ್ಯಾಟರ್‌ ಡೆವೊನ್ ಕಾನ್ವೇ 4 ಪೋರ್‌ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 42 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿ ಮಿಚಿದರು. ನಂತರ ಬಂದ ಯಾವ ಬ್ಯಾಟರ್‌ಗಳು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಿಲಿಲ್ಲ. ಅಂತಿಮ ಓವರ್‌ಗಳಲ್ಲಿ ಅರ್ಷದೀಪ್ ಬಿಗಿ ಬೌಲಿಂಗ್ ನ್ಯೂಜಿಲ್ಯಾಂಡ್‌ಗೆ ಅವಕಾಶ ಕೊಡಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್‌ 19.4 ಓವರ್‌ಗಳಲ್ಲಿ 10 ವಿಕೆಟ್‌ ಕಳೆದುಕೊಂಡು 160 ರನ್‌ ಗಳಿಸಿದೆ. ಭಾರತಕ್ಕೆ 161 ರನ್‌ಗಳ ಗುರಿ ನೀಡಿದೆ.

ಭಾರತದ ಪರ ಉತ್ತಮವಾಗಿ ಬೌಲಿಂಗ್‌ ಮಾಡಿದ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ತಲಾ 4 ವಿಕೆಟ್‌ ಪಡೆದರೆ, ಹರ್ಷಲ್ ಪಟೇಲ್ ಒಂದು ವಿಕೆಟ್‌ ಪಡೆದರು.

ಈ ಪಂದ್ಯವನ್ನು ಗೆಲ್ಲುವ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಭಾನುವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರು ಭರ್ಜರಿ ಶತಕದ ನೆರವಿನಿಂದ ಗೆದ್ದ  ಭಾರತ 1– 0ರಲ್ಲಿ ಮುನ್ನಡೆ ಸಾಧಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app