
- ಟೀಮ್ ಇಂಡಿಯಾ ಆಟಗಾರರಿಗೆ ತಣ್ಣಗಾದ 'ಸ್ಯಾಂಡ್ವಿಚ್' ವಿತರಣೆ
- ಆಟಗಾರರಿಗೆ ನೀಡಲಾಗುವ ಆಹಾರದ ಕುರಿತು ಐಸಿಸಿ ಮೇಲ್ನೋಟ
ಅಭ್ಯಾಸದ ಅವಧಿಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಸರಿಯಾದ ಆಹಾರ ಪೂರೈಸದ ಕುರಿತು ಆಕ್ಷೇಪ ವ್ಯಕ್ತವಾಗಿದೆ. ಟಿ20 ವಿಶ್ವಕಪ್ನಲ್ಲಿ ಪಾಲ್ಗೊಂಡಿರುವ ಟೀಮ್ ಇಂಡಿಯಾ ಸದ್ಯ ಸಿಡ್ನಿಯಲ್ಲಿ ಉಳಿದುಕೊಂಡಿದೆ.
ಸೂಪರ್ 12 ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸಿರುವ ಭಾರತ, ಗುರುವಾರ ನಡೆಯಲಿರುವ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಪೂರ್ವಭಾವಿಯಾಗಿ ನೆಟ್ಸ್ನಲ್ಲಿ ಅಭ್ಯಾಸ ನಡೆಸಿ ಸುಸ್ತಾಗಿ ಬಂದ ಆಟಗಾರರಿಗೆ ಗುಣಮಟ್ಟದ ಆಹಾರವನ್ನು ನೀಡಲಾಗಿರಲಿಲ್ಲ. ಕೇವಲ ಸ್ಯಾಂಡ್ವಿಚ್ ನೀಡಲಾಗಿತ್ತು. ಅದೂ ಸಹ ತಣ್ಣಗಾಗಿತ್ತು ಎಂದು ಟೀಮ್ ಇಂಡಿಯಾ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
Australia | The food that was offered to Team India was not good. They were just given sandwiches and they have also told ICC that food provided after the practice session in Sydney was cold and not good: BCCI sources https://t.co/VieFL1NNxM pic.twitter.com/QT9Mlr0XBG
— ANI (@ANI) October 26, 2022
ಈ ಸುದ್ದಿ ಓದಿದ್ದೀರಾ ? : ಇಂಗ್ಲೆಂಡ್ ಪಾಲಿಗೆ ವಿಲನ್ ಆದ 'ಮಳೆ' | ಐತಿಹಾಸಿಕ ಗೆಲುವು ಸಾಧಿಸಿದ ಐರ್ಲೆಂಡ್
ʻಸಿಡ್ನಿಯಲ್ಲಿ ಅಭ್ಯಾಸದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಆಟಗಾರರಿಗೆ ನೀಡಲಾಗಿದ್ದ ಆಹಾರ ಗುಣಮಟ್ಟದ್ದಾಗಿರಲಿಲ್ಲ. ಕೇವಲ ಸ್ಯಾಂಡ್ವಿಚ್ಗಳನ್ನು ನೀಡಲಾಗಿತ್ತು. ಅದೂ ಕೂಡ ತಣ್ಣಗಾಗಿತ್ತು ಮತ್ತು ಉತ್ತಮವಾಗಿಲ್ಲ. ಈ ಕುರಿತು ಐಸಿಸಿ ಗಮನಕ್ಕೆ ತರಲಾಗಿದೆʼ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಟಗಾರರಿಗೆ ನೀಡಲಾಗುವ ಆಹಾರದ ಕುರಿತು ಐಸಿಸಿ ಮೇಲ್ನೋಟ ವಹಿಸುತ್ತಿದೆ. ಸಿಡ್ನಿಯ ಉಪನಗರ ಬ್ಲ್ಯಾಕ್ ಟೌನ್ನಲ್ಲಿ ಟೀಮ್ ಇಂಡಿಯಾ ಸದಸ್ಯರು ಅಭ್ಯಾಸಕ್ಕೆ ಹಾಜರಾಗಬೇಕಿತ್ತು. ಆದರೆ ಈ ಸ್ಥಳಕ್ಕೆ ತಾವು ಉಳಿದುಕೊಂಡಿದ್ದ ಹೊಟೇಲ್ನಿಂದ 45 ನಿಮಿಷಗಳ ಕಾಲ ಪ್ರಯಾಣ ನಡೆಸಬೇಕು ಎಂಬ ಕಾರಣ ನೀಡಿ, ಟೀಮ್ ಇಂಡಿಯಾ ಅಭ್ಯಾಸಕ್ಕೆ ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಂಡಿತ್ತು ಎಂದು ಬಿಸಿಸಿಐ ತಿಳಿಸಿದೆ.