
- ಇಂಡಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ ಫೈನಲ್ ಹಣಾಹಣಿ
- ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾಗೆ 14 ರನ್ಗಳ ಗೆಲುವು
ರೋಡ್ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್ ಟೂರ್ನಿಯ ಫೈನಲ್ ಪಂದ್ಯವು ಶನಿವಾರ, ರಾಯ್ಪುರದಲ್ಲಿ ನಡೆಯಲಿದೆ. ಅಂತಿಮ ಹಣಾಹಣಿಯಲ್ಲಿ ಸಚಿನ್ ತೆಂಡೂಲ್ಕರ್ ಸಾರಥ್ಯದ ಇಂಡಿಯಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ. ಶಹೀದ್ ವೀರ್ ನಾರಾಯಣ್ಸಿಂಗ್ ಅಂತಾರಾಷ್ಟ್ರೀಯ ಮೈದಾನದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ.
ರೋಡ್ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್ ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಇಂಡಿಯಾ ಲೆಜೆಂಡ್ಸ್, ಸತತ ಎರಡನೇ ಬಾರಿಯೂ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ.
Its a repeat of the first season as the @India__Legends take on @LegendsSri! Shoutout to all the fans to come and support their favorite Legends for the mega finals! Book your tickets now on @bookmyshow 😍🎟️#RoadSafetyWorldSeries #rsws #cricket #yehjunghailegendary #IndLvsSLL pic.twitter.com/cWhnNjs83f
— Road Safety World Series (@RSWorldSeries) September 30, 2022
ಈ ಸುದ್ದಿ ಓದಿದ್ದೀರಾ ? : ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಬಾಬರ್ ಅಝಮ್
ಮೊದಲ ಸೆಮಿಪೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಜೆಂಡ್ಸ್ ವಿರುದ್ಧ ಸೋಲಿನ ಸುಳಿಗೆ ಸಿಲುಕಿದ್ದ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ನಮನ್ ಓಜಾ ಮತ್ತು ಇರ್ಫಾನ್ ಪಠಾಣ್ ಆಸರೆಯಾಗಿದ್ದರು. ಮೊದಲು ಬ್ಯಾಟ್ ಬಾಡಿದ್ದ ಆಸ್ಟ್ರೇಲಿಯ, ಸಚಿನ್ ಪಡೆಗೆ 172 ರನ್ಗಳ ಗುರಿ ನೀಡಿತ್ತು. ಚೇಸಿಂಗ್ ವೇಳೆ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್ ಬೇಗನೇ ವಿಕೆಟ್ ಒಪ್ಪಿಸಿದ್ದರು. ಆದರೆ ಆರಂಭಿಕ ನಮನ್ ಓಜಾ (90* ರನ್) ಮತ್ತು ಕೊನೆಯಲ್ಲಿ ಇರ್ಫಾನ್ ಪಠಾಣ್ ಸ್ಪೋಟಕ ಬ್ಯಾಟಿಂಗ್ (12 ಎಸೆತಗಳಲ್ಲಿ 37 ರನ್) ನೆರವಿನಿಂದ ಗೆಲುವಿನ ಸಂಭ್ರಮವನ್ನಾಚರಿಸಿತ್ತು.
ಶುಕ್ರವಾರ ನಡೆದ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡದ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್ 14 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಶ್ರೀಲಂಕಾ ನೀಡಿದ್ದ 173 ರನ್ಗಳ ಸವಾಲನ್ನು ಬೆನ್ನಟ್ಟುವಲ್ಲಿ ಎಡವಿದ ಕೆರಿಬಿಯನ್ನರು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಲಷ್ಟೇ ಶಕ್ತರಾದರು.
ಈ ಪಂದ್ಯದ ವಿಜೇತರನ್ನು ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಎದುರಿಸಲಿದೆ.