ಟ್ರಿಸ್ಟನ್ ಸ್ಟಬ್ಸ್ ಅಮೋಘ ಕ್ಯಾಚ್‌ ನೋಡಿ ದಂಗಾದ ಮೊಯಿನ್‌ ಅಲಿ

  • 2-1 ಅಂತರದಿಂದ ಟಿ20 ಸರಣಿ ಗೆದ್ದ ದಕ್ಷಿಣ ಆಫ್ರಿಕ
  • ಸ್ಟಬ್ಸ್ ಹಿಡಿದ ಅತ್ಯದ್ಭುತ ಕ್ಯಾಚ್‌ ಕಂಡು ದಂಗಾದ ಅಲಿ

ಟಿ20 ಸರಣಿಯ ಅಂತಿಮ ಮತ್ತು ನಿರ್ಣಾಯಕ ಮೂರನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕ, ಇಂಗ್ಲೆಂಡ್ ತಂಡವನ್ನು 90 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಆ ಮೂಲಕ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಆಫ್ರಿಕ, 5 ವಿಕೆಟ್‌ ನಷ್ಟದಲ್ಲಿ 191 ರನ್‌ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ ಯಾವುದೇ ಹೋರಾಟ ಪ್ರದರ್ಶಿಸದೆ 101 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಯಿತು. 27 ರನ್‌ ಗಳಿಸಿದ ಜಾನಿ ಬೆಸ್ಟೋ ಅವರದ್ದೇ ಸರ್ವಾಧಿಕ ಗಳಿಕೆ. ಉಳಿದಂತೆ ಜೇಸನ್‌ ರಾಯ್‌ 17 ರನ್‌ ಜಾಸ್‌ ಬಟ್ಲರ್‌ ಮತ್ತು ಕ್ರಿಸ್‌ ಜಾರ್ಡನ್‌ ತಲಾ 14 ರನ್‌ ಗಳಿಸಿದರು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ದಾಖಲೆಯೊಂದಿಗೆ ಭಾರತಕ್ಕೆ ಮೂರನೇ ಚಿನ್ನದ ಪದಕ

ಇಂಗ್ಲೆಂಡ್‌ಗೆ ಆಸರೆಯಾಗಬೇಕಾಗಿದ್ದ ಅನುಭವಿ ಆಲ್‌ರೌಂಡರ್‌ ಮೊಯಿನ್‌ ಅಲಿ, ಟ್ರಿಸ್ಟನ್ ಸ್ಟಬ್ಸ್ ಹಿಡಿದ ಅಮೋಘ ಕ್ಯಾಚ್​ಗೆ ಬಲಿಯಾದರು. 4 ಎಸೆತಗಳನ್ನು ಎದುರಿಸಿ 3 ರನ್‌ ಗಳಿಸಿದ್ದ ವೇಳೆ ಪಂದ್ಯದ 10ನೇ ಓವರ್‌ನಲ್ಲಿ ಆ್ಯಡಂ ಮರ್ಕ್ರಮ್ ಬೌಲಿಂಗ್‌ನಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ಅಲಿ, ಸ್ಟಬ್ಸ್ ಹಿಡಿದ ಅತ್ಯದ್ಭುತ ಕ್ಯಾಚ್‌ ಕಂಡು ದಂಗಾದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು  ವೈರಲ್ ಆಗುತ್ತಿದೆ. ಇದು ಈ ವರ್ಷದ ಶ್ರೇಷ್ಠ ಕ್ಯಾಚ್ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು  ರೀಜಾ ಹೆಂಡ್ರಿಕ್ಸ್ ಮತ್ತು ಆ್ಯಡಂ ಮರ್ಕ್ರಮ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಆಫ್ರಿಕ 191 ರನ್ ಗಳಿಸಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್