ಕತಾರ್‌ ಫಿಫಾ ವಿಶ್ವಕಪ್‌ | ಏಂಜೆಲ್ ಡಿ ಮರಿಯಾ ಮೂಲಕ ಯುಎಇ ವಿರುದ್ಧ ಜಯಭೇರಿ; ವಿಶ್ವಕಪ್‌ಗೆ ಅರ್ಜೆಂಟೀನಾ ಭರ್ಜರಿ ತಯಾರಿ

  • ಯುಎಇ ವಿರುದ್ಧ 5-0 ಅಂತರದ ಗೋಲಿನ ಜಯ
  • 2 ಗೋಲು, 1 ಅಸಿಸ್ಟ್‌ ಮಾಡಿದ ಏಂಜೆಲ್ ಡಿ ಮಾರಿಯಾ

ಭಾನುವಾರದಿಂದ ಕತಾರ್‌ನಲ್ಲಿ ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಅರ್ಜೆಂಟೀನಾ ಭರ್ಜರಿ ತಯಾರಿ ನಡೆಸಿದೆ. ಅಭ್ಯಾಸ ಪಂದ್ಯದಲ್ಲಿ ದುರ್ಬಲ ಯುಎಇ ವಿರುದ್ಧ 5-0 ಅಂತರದ ಗೋಲಿನ ಜಯ ದಾಖಲಿಸುವ ಮೂಲಕ ಎದುರಾಳಿ ತಂಡಗಳಿಗೆ ಮೆಸ್ಸಿ ಪಡೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಅಬುಧಾಬಿಯ ಮುಹಮ್ಮದ್ ಬಿನ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ಗೋಲು ಬಾರಿಸಿದ ಏಂಜೆಲ್ ಡಿ ಮಾರಿಯಾ, ಮೆಸ್ಸಿ ಗೋಲಿಗೆ ಅಸಿಸ್ಟ್‌ ಮಾಡುವ ಮೂಲಕ ಪಂದ್ಯದ ಹೀರೋ ಎನಿಸಿದರು. ಪಂದ್ಯದ 16ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಝ್‌ ಮೂಲಕ ಅರ್ಜೆಂಟೀನಾ ಗೋಲಿನ ಖಾತೆ ತೆರೆದಿತ್ತು. ಆ ಬಳಿಕ  35 ಮತ್ತು 43ನೇ ನಿಮಿಷಗಳಲ್ಲಿ ನಿಮಿಷ: ಏಂಜೆಲ್ ಡಿ ಮರಿಯಾ ಗೋಲಿನ ಮೂಲಕ ಪ್ರವಾಸಿ ತಂಡ, ಮೊದಲಾರ್ಧದಲ್ಲೇ 3-0 ಮುನ್ನಡೆ ಸಾಧಿಸಿತ್ತು. ದ್ವಿತಿಯಾರ್ಧದ 43ನೇ ನಿಮಿಷದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಮತ್ತು 59ನೇ ನಿಮಿಷದಲ್ಲಿ ಜೋಕ್ವಿನ್ ಕೊರಿಯಾ ಗೋಲು ದಾಖಲಿಸಿದರು.

Eedina App

30 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಬೆಂಬಲವಿದ್ದರೂ  ಸಹ ಅತಿಥೇಯ ಯುಎಇ, ಪಂದ್ಯದುದ್ದಕ್ಕೂ ನೀರಸ ಪ್ರದರ್ಶನ ನೀಡಿತು. ಎದುರಾಳಿ ಬಲಿಷ್ಠ ಅರ್ಜೆಂಟೀನಾದ ವಿರುದ್ಧದ ಪಂದ್ಯದಲ್ಲಿ ಯುಎಇ ಆಟಗಾರರರಲ್ಲಿ ಆತ್ಮವಿಶ್ವಸದ ಕೊರತೆ ಎದ್ದುಕಾಣುತ್ತಿತ್ತು.

AV Eye Hospital ad

ಅಭ್ಯಾಸ ಪಂದ್ಯದ ಉಳಿದ ಫಲಿತಾಂಶಗಳನ್ನು ನೋಡುವುದಾದರೆ

ಸೌದಿ ಅರೆಬಿಯ 0-1 ಕ್ರೊವೇಷಿಯ (ಆಂಡ್ರೆಜ್ ಕ್ರಾಮರಿಕ್, 82 ನಿಮಿಷ)

ಒಮಾನ್‌ 0-1 ಜರ್ಮನಿ (ನಿಕ್ಲಾಸ್ ಫುಲ್‌ಕ್ರುಗ್, 80ನೇ ನಿಮಿಷ) |

ಪೋಲೆಂಡ್‌ 1-0  ಚಿಲಿ

ಇರಾನ್ 0-2 ಟುನಿಷಿಯ

ಮೆಕ್ಸಿಕೋ 1-2 ಸ್ವೀಡನ್

ನಿಮಗೆ ಏನು ಅನ್ನಿಸ್ತು?
0 ವೋಟ್
eedina app