
- 2 ವಿಕೆಟ್ ನಷ್ಟದಲ್ಲಿ 192 ರನ್ಗಳಿಸಿದ ಟೀಮ್ ಇಂಡಿಯಾ
- ಅಂತಿಮ ಓವರ್ನಲ್ಲಿ 26 ರನ್ ಚಚ್ಚಿದ ಸೂರ್ಯಕುಮಾರ್ ಯಾದವ್
ಏಷ್ಯಾ ಕಪ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಹಾಂಕಾಂಗ್ ಗೆಲುವಿಗೆ ಟೀಮ್ ಇಂಡಿಯಾ 193 ರನ್ಗಳ ಕಠಿಣ ಗುರಿ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಗಳಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಕೇವಲ 2 ವಿಕೆಟ್ ನಷ್ಟದಲ್ಲಿ 192 ರನ್ಗಳಿಸಿದೆ.
ಏಷ್ಯಾಕಪ್ನಲ್ಲಿ ಮೊದಲ ಅರ್ಧಶತಕ
ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ, ತಾಳ್ಮೆಯ ಅರ್ಧಶತಕ ದಾಖಲಿಸುವ ಮೂಲಕ ಫಾರ್ಮ್ ಕಂಡುಕೊಂಡರು. ಈ ಬಾರಿಯ ಏಷ್ಯಾಕಪ್ನಲ್ಲಿ ದಾಖಲಾದ ಮೊದಲ ಅರ್ಧಶತಕ ಇದಾಗಿದೆ. 40 ಎಸೆತಗಳಲ್ಲಿ 50 ರನ್ ಪೂರೈಸಿದ ಕೊಹ್ಲಿ, ಅಂತಿಮವಾಗಿ 44 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 59 ರನ್ಗಳಿಸಿ ಅಜೇಯರಾಗುಳಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಕೊಹ್ಲಿ ಬ್ಯಾಟ್ನಿಂದ ದಾಖಲಾದ 31ನೇ ಅರ್ಧಶತಕ ಇದಾಗಿದೆ. ಈ ಮೂಲಕ ರೋಹಿತ್ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದರು.
ಅಂತಿಮ ಓವರ್ನಲ್ಲಿ 26 ರನ್ ಚಚ್ಚಿದ ಸೂರ್ಯ !
ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್, ಹಾಂಕಾಂಗ್ ಬೌಲರ್ಗಳನ್ನು ಮನಸ್ಸೋ ಇಚ್ಛೆ ದಂಡಿಸಿದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಸೂರ್ಯ, 26 ಎಸೆತಗಳಲ್ಲಿ 68 ರನ್ಗಳಿಸಿ ಅಜೇಯರಾಗುಳಿದರು. ಸೂರ್ಯಕುಮಾರ್ ಸ್ಫೋಟಕ ಇನ್ನಿಂಗ್ಸ್ನಲ್ಲಿ 6 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿಗಳು ಒಳಗೊಂಡಿದ್ದವು. ಅದರಲ್ಲೂ ಹಾರೂನ್ ಅರ್ಷಾದ್ ಎಸೆದ ಅಂತಿಮ ಓವರ್ ಒಂದರಲ್ಲೇ 26 ರನ್ ಚಚ್ಚಿದರು.
𝗜𝗻𝗻𝗶𝗻𝗴𝘀 𝗕𝗿𝗲𝗮𝗸: A sparkling 98-run partnership from 42 balls between @imVkohli and @surya_14kumar takes India to 192-2 against Hong Kong. The two batters smashed 78 runs in the last 5 overs. 🙌🏾⚡️
— BCCI (@BCCI) August 31, 2022
Details: https://t.co/k9H9a0e758 #INDvHK #AsiaCup2022 pic.twitter.com/vro0mMnuLc
ಆರಂಭಿಕನಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ 36 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 21 ರನ್ಗಳಿಸಿ ಆಯುಷ್ ಶುಕ್ಲಾಗೆ ವಿಕೆಟ್ ಒಪ್ಪಿಸಿದರು.