ಮುಂಬೈನ ಹೊಂಡ-ಗುಂಡಿಗಳ ರಸ್ತೆಯಲ್ಲಿ ವಿರುಷ್ಕಾ ದಂಪತಿಯ 'ಸ್ಕೂಟಿ ರೈಡ್'

  • ಮುಂಬೈನ ಬೀದಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸುತ್ತಾಟ
  • ಕಪ್ಪು ಬಣ್ಣದ ಸುಜುಕಿ ಆ್ಯಕ್ಸೆಸ್ ಸ್ಕೂಟಿಯಲ್ಲಿ ʻಜಾಲಿʼ ರೈಡ್

ತಾರಾ ದಂಪತಿ, ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈನ ಬೀದಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ್ದು, ವಿಡಿಯೋ ವೈರಲ್‌ ಆಗಿದೆ.

ಮನೆಯಲ್ಲಿ ಐಷಾರಾಮಿ ಕಾರುಗಳಿದ್ದರೂ ಸಹ ಅವುಗಳ ಬದಲು, ಮುಂಬೈನ ಮದ್‌ ಐಲ್ಯಾಂಡ್‌ನ ಹೊಂಡ-ಗುಂಡಿಗಳಿಂದ ತುಂಬಿದ್ದ ರಸ್ತೆಯಲ್ಲಿ ಕಪ್ಪು ಬಣ್ಣದ ಸುಜುಕಿ ಆ್ಯಕ್ಸೆಸ್ ಸ್ಕೂಟಿಯಲ್ಲಿ ಕೊಹ್ಲಿ ರೈಡ್ ಮಾಡಿದ್ದರೆ, ಅನುಷ್ಕಾ ಶರ್ಮಾ ಹಿಂದೆ ಕೂತು ರೈಡ್ ಎಂಜಾಯ್ ಮಾಡಿದ್ದಾರೆ. ಇಬ್ಬರು ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿ ರೈಡ್ ಮಾಡಿದ್ದಾರೆ. ಇನ್ನು ಮುಂಬೈನಲ್ಲಿ ಮಳೆಯಾಗುತ್ತಿರುವ ಕಾರಣ ಅನುಷ್ಕಾ ಬಿಳಿ ಬಣ್ಣದ ಕೊಡೆಯನ್ನು ಹಿಡಿದುಕೊಂಡಿದ್ದರು.  

ಈ ಸುದ್ದಿ ಓದಿದ್ದೀರಾ ? : ಏಷ್ಯಾ ಕಪ್‌| ತಂಡದಿಂದ ಹೊರನಡೆದ ಪಾಕಿಸ್ತಾನದ ಪ್ರಮುಖ ಬೌಲರ್‌

AV Eye Hospital ad

ಯಾವುದೇ ಭದ್ರತೆ ಇಲ್ಲದೆ ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ಸ್ಕೂಟಿ ರೈಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಇದು ಜಾಹೀರಾತು ಚಿತ್ರೀಕರಣವೇ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ಸುದ್ದಿವಾಹಿನಿ 'ಎನ್‌ಡಿಟಿವಿ'ಯ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿ ಏಕದಿನ ಸರಣಿಯನ್ನಾಡುತ್ತಿರುವ ಟೀಂ ಇಂಡಿಯಾದಿಂದ ವಿರಾಟ್‌ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿ ಹಳೆಯ ಲಯ ಕಂಡುಕೊಳ್ಳಲು ಸಾಕಷ್ಟು ಒದ್ದಾಡುತ್ತಿರುವ ವಿರಾಟ್‌ ಕೊಹ್ಲಿ, 2019ರ ನವೆಂಬರ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್‌ ಟಿ20 ಟೂರ್ನಿಗೆ ಕೊಹ್ಲಿ ವಾಪಸ್ ಆಗಲಿದ್ದಾರೆ. ಆಗಸ್ಟ್ 28ರಂದು ನಡೆಯುವ ತಮ್ಮ ಮೊದಲ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app