
- ಟಿ20 ಸರಣಿಯಿಂದ ಹೊರಗುಳಿದಿದ್ದ ಸಂಜು
- ʻಸಂಜು ಜೊತೆಗಿದ್ದೇವೆʼ ಪೋಸ್ಟರ್ ಪ್ರದರ್ಶನ
ಟೀಮ್ ಇಂಡಿಯಾದಿಂದ ಪದೇ ಪದೇ ಕಡೆಗಣಿಸಲ್ಪಡುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಬೆಂಬಲ ವ್ಯಕ್ತವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದರು. ಆದರೆ ಟಿ20 ಸರಣಿಯಲ್ಲಿ ಆಡುವ ಬಳಗದಿಂದ ಸಂಜು ಸ್ಯಾಮ್ಸನ್ರನ್ನು ಹೊರಗಿಡಲಾಗಿತ್ತು. ಈ ತೀರ್ಮಾನದ ವಿರುದ್ಧ ಮಾಜಿ ಆಟಗಾರರು ಸೇರಿದಂತೆ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪತ್ರಿಕಾಗೋಷ್ಠಿಯಲಿ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಸಹ ಸಂಜು ಕೈಬಿಟ್ಟ ಕುರಿತ ಪ್ರಶ್ನೆಗೆ ಸಮರ್ಪಕ ಉತ್ತರ ನೀwiರಲಿಲ್ಲ. ಇದಾದ ಬಳಿಕ ಆರಂಭವಾದ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಥಾನ ಪಡೆದಿದ್ದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು 38 ಎಸೆತಗಳಲ್ಲಿ 36 ರನ್ ಗಳಿಸಿ ನಿರ್ಗಮಿಸಿದ್ದರು. ಅದಾಗಿಯೂ ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಿಂದ ಸಂಜುರನ್ನು ಕೈಬಿಡಲಾಗಿತ್ತು. ಸಂಜು ಬದಲು ದೀಪಕ್ ಹೂಡಾಗೆ ಅವಕಾಶ ನೀಡಲಾಗಿತ್ತು.
ಇದೀಗ ಫಿಫಾ ವಿಶ್ವಕಪ್ ನಡೆಯುತ್ತಿರುವ ಕತಾರ್ನಲ್ಲೂ ಸಂಜು ಸ್ಯಾಮ್ಸನ್ರನ್ನು ಕೈಬಿಡುತ್ತಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳುತ್ತಿರುವ ಭಾರತೀಯ ಮೂಲದ ಅಭಿಮಾನಿಗಳು ಸಂಜು ಸ್ಯಾಮ್ಸನ್ ಪರ ಪೋಸ್ಟರ್ಗಳನ್ನು ಹಿಡಿದು ಬೆಂಬಲ ಸೂಚಿಸುತ್ತಿದ್ದಾರೆ.
Everybody: Who are you supporting at the FIFA World Cup?
— Rajasthan Royals (@rajasthanroyals) November 27, 2022
Us: pic.twitter.com/e66NRg78dh
ʻಕತಾರ್ನಿಂದ, ಬಹಳಷ್ಟು ಪ್ರೀತಿಯಿಂದ ಸಂಜು ಸ್ಯಾಮ್ಸ್ನ್ರನ್ನು ಬೆಂಬಲಿಸುತ್ತೇವೆʼ. 'ಯಾವುದೇ ಪಂದ್ಯ, ಆಟಗಾರ ಅಥವಾ ತಂಡದ ಹಂಗಿಲ್ಲದೇ ನಾವು ಸಂಜು ಸ್ಯಾಮ್ಸನ್ ಜೊತೆಗಿದ್ದೇವೆʼ ಎಂಬ ಬ್ಯಾನರ್ಗಳನ್ನು ಅಭಿಮಾನಿಗಳು ವಿಶ್ವಕಪ್ ಪಂದ್ಯಗಳು ನಡೆಯುತ್ತಿರುವ ಗ್ಯಾಲರಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಈ ಚಿತ್ರಗಳನ್ನು ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ.