ಐತಿಹಾಸಿಕ ಏಕದಿನ ಕ್ರಿಕೆಟ್‌ ಸರಣಿ ಗೆದ್ದ ನ್ಯೂಝಿಲೆಂಡ್‌

  • ಮೊದಲ ಹಣಾಹಣಿಯಲ್ಲಿ ಮುಗ್ಗರಿಸಿದ್ದ ನ್ಯೂಝಿಲೆಂಡ್‌
  • ಕೈಲ್‌ ಮೇಯರ್ಸ್‌ ತಾಳ್ಮೆಯ ಶತಕ ವ್ಯರ್ಥ

ಕೇನ್‌ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ಟಾಮ್‌ ಲಾಥಮ್‌ ಸಾರಥ್ಯದಲ್ಲಿ ನ್ಯೂಝಿಲೆಂಡ್‌ ತಂಡ, ಕೆರಿಬಿಯನ್ನರ ನಾಡಲ್ಲಿ ಐತಿಹಾಸಿಕ ಏಕದಿನ ಕ್ರಿಕೆಟ್‌ ಸರಣಿ ಗೆಲುವಿನ ಸಂಭ್ರಮವನ್ನಾಚರಿಸಿದೆ.

ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿಯಲ್ಲೇ ಮುಗ್ಗರಿಸಿದ್ದ ಕಿವೀಸ್‌, ಆನಂತರದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸುವುದರ ಮೂಲಕ ಸರಣಿ ಗೆದ್ದುಕೊಂಡಿದೆ.

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್‌ ಇಂಡೀಸ್‌,  ಆರಂಭಿಕ ಕೈಲ್‌ ಮೇಯರ್ಸ್‌ ತಾಳ್ಮೆಯ ಶತಕದ ನೆರವಿನಿಂದ 8 ವಿಕೆಟ್‌ ನಷ್ಟದಲ್ಲಿ 301 ರನ್‌ಗಳಿಸಿತ್ತು. ಅನಿವಾರ್ಯ ಗೆಲುವಿನ ಒತ್ತಡವನ್ನು ಮೆಟ್ಟಿನಿಂತ ಕಿವೀಸ್‌, 47.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ  ಗುರಿ ತಲುಪಿ ಐತಿಹಾಸಿಕ ಗೆಲುವಿನ ನಗೆ ಬೀರಿತು. ನಾಲ್ವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕವು ಕಿವೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಈ ಸುದ್ದಿ ಓದಿದ್ದೀರಾ ? : 8 ಸೆಕೆಂಡ್‌ಗಳಲ್ಲೇ ಗೋಲು! ಲೀಗ್‌-1ನಲ್ಲಿ ಎಂಬಾಪೆ ದಾಖಲೆ

ಆರಂಭಿಕ, ಅನುಭವಿ ಆಟಗಾರ ಮಾರ್ಟಿನ್‌ ಗಪ್ಟಿಲ್‌ 57 ರನ್‌, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಡೆವೋನ್‌ ಕಾನ್ವೆ 56 ರನ್‌, ನಾಯಕ ಟಾಮ್‌ ಲಾಥಮ್‌ 69 ಹಾಗೂ ಡ್ಯಾರಿಲ್‌ ಮಿಚೆಲ್‌ 63 ರನ್‌ಗಳ ನೆರವಿನಿಂದ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ನ್ಯೂಝಿಲೆಂಡ್‌ ಐತಿಹಾಸಿಕ ಗೆಲುವಿನ  ಸಂಭ್ರಮವನ್ನಾಚರಿಸಿತು. ವಿಂಡೀಸ್‌ ಪರ ಜೇಸನ್‌ ಹೋಲ್ಡರ್‌ ಮತ್ತು ಯಾನಿಕ್ ಕ್ಯಾರಿಯಾ ತಲಾ ಎರಡು ವಿಕೆಟ್‌ ಪಡೆದರು. ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್,  ಕೈಲ್‌ ಮೇಯರ್ಸ್ 105 ರನ್‌, ನಾಯಕ ನಿಕೊಲಸ್‌ ಪೂರನ್ 91 ಹಾಗೂ ಶಾಯ್‌ ಹೋಪ್‌ 51 ರನ್‌ಗಳ ನೆರವಿನಿಂದ 5 ವಿಕೆಟ್‌  ನಷ್ಟದಲ್ಲಿ 307 ರನ್‌ಗಳಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್