ವಿಶ್ವ ಅಥ್ಲೆಟಿಕ್ಸ್ | 7ನೇ ಸ್ಥಾನ ಗಳಿಸಿದ ಶ್ರೀಶಂಕರ್‌ ಮುರಳಿ

  • ಭರವಸೆ ಉಳಿಸಿಕೊಳ್ಳದ ಆಟಗಾರರು
  • 6 ಯತ್ನಗಳಲ್ಲಿ 8 ಮೀ ತಲುಪದ ಶ್ರೀಶಂಕರ್

ಲಾಂಗ್ ಜಂಪ್ ಪಟು ಶ್ರೀಶಂಕರ್ ಮುರಳಿ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಿಶ್ವ 3 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಲಾಂಗ್‌ಜಂಪ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪುರುಷ ಅಥ್ಲೀಟ್‌ ಎನಿಸಿಕೊಂಡಿದ್ದ ಶ್ರೀಶಂಕರ್ 7.96 ಮೀ. ನೆಗೆದು 7ನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ.

6 ಯತ್ನಗಳಲ್ಲಿ ಒಮ್ಮೆಯೂ ಶ್ರೀಶಂಕರ್ 8 ಮೀ. ತಲುಪಲಿಲ್ಲ. ಮೊದಲ ಯತ್ನದಲ್ಲಿ 7.96 ಮೀ., 4ನೇ ಯತ್ನದಲ್ಲಿ 7.89 ಮೀ., ಕೊನೆಯ ಯತ್ನದಲ್ಲಿ 7.83 ಮೀ, ನೆಗೆದರು. ಇನ್ನುಳಿದ 3 ಯತ್ನಗಳು ಫೌಲ್ ಆದವು. ಈ ಋತುವಿನಲ್ಲಿ 8.36 ಮೀ. ನೆಗೆದಿದ್ದ ಕೇರಳದ ಶ್ರೀಶಂಕರ್ ಮುರಳಿ, ಅದೇ ಪ್ರದರ್ಶನ ಮತ್ತೆ ತೋರಿಸಿದ್ದಲ್ಲಿ ಚಿನ್ನದ ಪದಕ ದೊರೆಯುತ್ತಿತ್ತು.

ಈ ಸುದ್ದಿಓದಿದ್ದೀರಾ? ಸುದ್ದಿಯಾದವರು | ಸದ್ದಿಲ್ಲದೆ 21 ಮುಕುಟ ಧರಿಸಿದ ನೊವಾಕ್ ಜೊಕೊವಿಚ್ 

ಚೀನಾದ ಜಿಯಾನನ್ ವಾಂಗ್ 8.36 ಮೀ.ನೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ ಚಾಂಪಿಯನ್ ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಗ 8.30 ಮೀ. ನೆಗೆದು ಬೆಳ್ಳಿ ಜಯಿಸಿದರು. 8.16 ಮೀ.ನೊಂದಿಗೆ ಸ್ಪಿಟ್ಜರ್‌ಲೆಂಡ್‌ನ ಸೈಮನ್ ಹ್ಯಾಮರ್ ಕಂಚು ತಮ್ಮದಾಗಿಸಿಕೊಂಡರು.

ಫೈನಲ್‌ ತಲುಪದ ಪಾರುಲ್‌ ಜಬೀರ್

ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಹೀಟ್ಸ್‌ನಲ್ಲಿ 12ನೇ ಸ್ಥಾನ ಪಡೆದ ಪಾರುಲ್ ಚೌಧರಿ, ಒಟ್ಟಾರೆ 31ನೇ ಸ್ಥಾನ ಪಡೆದರು. ಇದೇ ವೇಳೆ ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಪಳ್ಳಿಯಾಲಿಲ್ ಜಬೀರ್ 31ನೇ ಸ್ಥಾನ ಪಡೆದು ಫೈನಲ್‌ಗೇರಲು ವಿಫಲರಾದರು.

ನಿಮಗೆ ಏನು ಅನ್ನಿಸ್ತು?
0 ವೋಟ್