
ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮುನ್ನಡೆಸುತ್ತಿರುವ ಪೋರ್ಚುಗಲ್ ತಂಡವು, ಆಫ್ರಿಕನ್ ಫುಟ್ಬಾಲ್ ಶಕ್ತಿಯಾಗಿ ಗುರುತಿಸಿಕೊಂಡಿರುವ ಘಾನಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಕತಾರ್ ಫಿಫಾ ವಿಶ್ವಕಪ್ ಫುಟ್ಬಾಲ್ನಲ್ಲಿ ಶುಭಾರಂಭ ಮಾಡಿದೆ.
🇵🇹 Portugal picks up three points against Ghana after a hectic second half@adidasfootball | #FIFAWorldCup
— FIFA World Cup (@FIFAWorldCup) November 24, 2022
ಕತಾರ್ನ ಸ್ಟೇಡಿಯಂ 974ನಲ್ಲಿ ರಾತ್ರಿ 9.30ಕ್ಕೆ ಪ್ರಾರಂಭವಾದ ಇಂದಿನ ಪಂದ್ಯದಲ್ಲಿ, ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದ ಕ್ರಿಸ್ಟಿಯಾನೊ ರೊನಾಲ್ಡೊ, ಪೋರ್ಚುಗಲ್ಗೆ ಮುನ್ನಡೆ ನೀಡಲು ಸಫಲರಾದರು. ಆ ಬಳಿಕ ಪ್ರಬಲ ಹೋರಾಟ ನೀಡಿದ ಘಾನಾದ ಆಂಡ್ರೆ ಆಯೆವ್ ಗೋಲು ಹೊಡೆದು ಸಮಬಲದ ಪೈಪೋಟಿ ನೀಡಿದರು. ಬಳಿಕ ಮತ್ತೆ ಹೋರಾಟ ನೀಡಿದ ಪೋರ್ಚುಗಲ್ ತಂಡ, ಮತ್ತೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿ 3-1 ಮುನ್ನಡೆ ಪಡೆಯಿತು.
ಪೋರ್ಚುಗಲ್ ಪರವಾಗಿ ರೊನಾಲ್ಡೊ (ಪೆನಾಲ್ಟಿ, 65ನೇ ನಿಮಿಷ), ಫೆಲಿಕ್ಸ್ (78ನೇ ನಿಮಿಷ)ಲಿಯೋ 80ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಘಾನಾ ಪರವಾಗಿ ಅಯಿಯೋ 73ನೇ ನಿಮಿಷ, ಬುಖಾರಿ 89ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪೂರ್ಣಾವಧಿಯ ವೇಳೆಗೆ ಘಾನಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಕತಾರ್ ಫಿಫಾ ವಿಶ್ವಕಪ್ ಫುಟ್ಬಾಲ್ನಲ್ಲಿ ಪೋರ್ಚುಗಲ್ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ 'ಎಚ್' ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.