ವಿಶ್ವಕಪ್ ಫುಟ್‌ಬಾಲ್ | ನಾಲ್ಕು ಬಾರಿಯ ಚಾಂಪಿಯನ್ನರನ್ನು ಬಗ್ಗು ಬಡಿದ ಜಪಾನ್

World Cup Football  Japan beat the four-time champions
  • ಜರ್ಮನಿಯ ರಕ್ಷಣಾ ಕೋಟೆ ಭೇದಿಸಿದ ಏಷ್ಯಾದ ರಾಷ್ಟ್ರ
  • 2-1 ಗೋಲಿನಿಂದ ಸೋಲಿಸಿದ ಜಪಾನ್

 

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್‌ನ ಬುಧವಾರದ ಪಂದ್ಯದಲ್ಲಿ 2014ರ ಚಾಂಪಿಯನ್ ಜರ್ಮನಿಯನ್ನು ಏಷ್ಯಾದ ರಾಷ್ಟ್ರವಾದ ಜಪಾನ್ 2-1 ಗೋಲಿನಿಂದ ಸೋಲಿಸಿ, ಸಾಧನೆಗೈದಿದೆ.

ದೋಹಾದ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ 'ಇ' ಗುಂಪಿನ ಪಂದ್ಯದಲ್ಲಿ ಜಪಾನ್ 2-1 ಗೋಲುಗಳಿಂದ 4 ಬಾರಿಯ ಚಾಂಪಿಯನ್ ಜರ್ಮನಿಯನ್ನು ಸೋಲಿಸಿದೆ.

ಮಂಗಳವಾರ ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ಸೋತ ಬಳಿಕ, ಕತಾರ್ ವಿಶ್ವಕಪ್‌ನಲ್ಲಿ ಇದು ಫುಟ್‌ಬಾಲ್ ದೈತ್ಯ ರಾಷ್ಟ್ರಗಳಿಗೆ ಬಹುಶಃ ಎರಡನೇ ಅತಿದೊಡ್ಡ ಆಘಾತವಾಗಿದೆ.

ಪಂದ್ಯ ಮೊದಲಾರ್ಧದ ಆರಂಭದಲ್ಲಿ ಇಲ್ಕೆ ಗುಂಡೋಗನ್ ಪೆನಾಲ್ಟಿ ಮೂಲಕ ಜರ್ಮನಿಗೆ ಮುನ್ನಡೆ ಸಾಧಿಸಲು ನೆರವಾಗಿದ್ದರು. ಆದಾಗ್ಯೂ, ದ್ವಿತೀಯಾರ್ಧದಲ್ಲಿ, ಜರ್ಮನಿಯ ಪ್ರಬಲ ರಕ್ಷಣಾ ಕೋಟೆಯನ್ನು ಭೇದಿಸಿದ ಜಪಾನ್, ಎರಡು ಗೋಲುಗಳನ್ನು ದಾಖಲಿಸಿ, ಐತಿಹಾಸಿಕ ಜಯವನ್ನು ಗಳಿಸಲು ಸಾಧ್ಯವಾಯಿತು. ಜಪಾನಿನ ಗೆಲುವಿನಲ್ಲಿ ಗೋಲ್‌ ಕೀಪರ್‌ ಮಹತ್ವದ ಪಾತ್ರ ವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180