ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು

  • ಬಾಕ್ಸರ್‌ ಆಗಿದ್ದ ನಿಖಿಲ್ ತಂದೆ  
  • ಕಿಕ್ ಬಾಕ್ಸಿಂಗ್​ನಲ್ಲಿ ಹೆಸರು ಮಾಡಬೇಕೆಂದು ಕನಸು ಹೊತ್ತಿದ್ದ ನಿಖಿಲ್​  

ಕಿಕ್ ಬಾಕ್ಸಿಂಗ್​ನಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ‌ನೊಬ್ಬ ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಖಿಲ್ (24) ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ ಕೆ 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಜುಲೈ 10ರಂದು ಕಿಕ್ ಬಾಕ್ಸಿಂಗ್​ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಿಖಿಲ್​ ಪಾಲ್ಗೊಂಡಿದ್ದರು.

ಕಿಕ್ ಬಾಕ್ಸಿಂಗ್​ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್​ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್​ನಲ್ಲೇ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ಕೂಡಲೇ ಅವರನ್ನು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಎರಡು ದಿನ ಕೋಮಾದಲ್ಲಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು.

ಈ ಸುದ್ದಿ ಓದಿದ್ದೀರಾ?  ದೇಶೀಯ ಕ್ರಿಕೆಟ್ ಆಡಿ, ಫಾರ್ಮ್‌ಗೆ ಮರಳಿ | ಕೊಹ್ಲಿಗೆ ಕಿರ್ಮಾನಿ ಸಲಹೆ

ನಿಖಿಲ್ ತಂದೆ ಬಾಕ್ಸರ್ ಆಗಿದ್ದರು. ಕಿಕ್ ಬಾಕ್ಸಿಂಗ್​ನಲ್ಲಿ ಹೆಸರು ಮಾಡಬೇಕೆಂದು ನಿಖಿಲ್​ ಕನಸು ಕಂಡಿದ್ದ. ಕಿಕ್ ಬಾಕ್ಸಿಂಗ್​ನ ರಿಂಗ್​ನಲ್ಲಿ ನಿಖಿಲ್ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಿಖಿಲ್​ರ ಬದುಕಿನ ಕೊನೆಯ ಕ್ಷಣ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್