ಭಾರತದ ಗೆಲುವಿಗೆ 190 ರನ್ ಗುರಿ ನೀಡಿದ ಜಿಂಬಾಬ್ವೆ

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, 190 ರನ್‌ಗಳ ಗೆಲುವಿನ ಗುರಿ ಪಡೆದಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ, ಆತಿಥೇಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆದರೆ ಭಾರತದ ಬಿಗು ಬೌಲಿಂಗ್‌ ದಾಳಿ ಎದುರು ಪರದಾಡಿದ ಜಿಂಬಾಬ್ವೆ 40.3 ಓವರ್‌ಗಳಲ್ಲಿ ಸರ್ವಪತನ ಕಂಡಿದೆ.

ಜಿಂಬಾಬ್ವೆ ನಾಯಕ ರೇಜಿಸ್‌ ಚಕಬ್ವಾ  35 ರನ್‌, ಬ್ರಾಂಡ್‌ ಇವಾನ್ಸ್‌  33 ಹಾಗೂ ರಿಚಾರ್ಡ್‌ ಎನ್‌ಗರವಾ 34 ರನ್‌ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತವನ್ನು ತಲುಪಲು ವಿಫಲರಾದರು. ಭಾರತದ ಪರ ಏಳು ಓವರ್‌ ಎಸೆದ ದೀಪಕ್‌ ಚಾಹರ್‌ 27 ರನ್‌ ನೀಡಿ ಮೂರು ವಿಕೆಟ್‌ ಪಡೆದರು.  ಪ್ರಸಿದ್ಧ್‌ ಕೃಷ್ಣ ಹಾಗೂ ಅಕ್ಷರ್‌ ಪಟೇಲ್‌ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್