ಒಂದು ನಿಮಿಷದ ಓದು | ವರುಣಾರ್ಭಟಕ್ಕೆ ತತ್ತರಿಸಿದ 14 ಜಿಲ್ಲೆ, 64 ಮಂದಿ ಸಾವು 

R Ashoka

ರಾಜ್ಯದಲ್ಲಿನ ಉಂಟಾಗಿರುವ ಅತಿವೃಷ್ಟಿಯಿಂದಾಗಿ ಈವರೆಗೆ ಒಟ್ಟು 64 ಮಂದಿ ಸಾವನ್ನಪ್ಪಿದ್ದು 14 ಜಿಲ್ಲೆಗಳಿಗೆ ತೊಂದರೆಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ ಅಶೋಕ್, ರಾಜ್ಯದಲ್ಲಿನ ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 14,956 ಜನರು  ಪ್ರವಾಹ ಪೀಡಿತರಾಗಿದ್ದಾರೆ. 608 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾದರೆ, 2,450 ಮನೆಗಳು ಭಾಗಶಃ ಹಾನಿಯಾಗಿವೆ. 8,057 ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 18,280 ಹೆಕ್ಟೇರ್ ಕೃಷಿ ಜಮೀನು, 4500 ತೋಟಗಾರಿಕೆ ಬೆಳೆ ನಾಶವಾಗಿದೆ. 1,392 ಕಿ.ಮೀ ರಸ್ತೆ ಮತ್ತು 61 ಕೆರೆಗಳಿಗೆ ಹಾನಿಯಾಗಿವೆ. 299 ಸೇತುವೆ ಹಾಗೂ 4,223 ಶಾಲೆಗಳಿಗೆ ಮಳೆಯಿಂದ ತೊಂದರೆಯಾಗಿದೆ. ಹಾಗೆಯೇ ಕಾಳಜಿ ಕೇಂದ್ರದಲ್ಲಿ 6,933 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್