ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ಹಂಚಿಕೆ ವಿಚಾರ | ₹2,540 ಬೆಂಬಲ ಬೆಲೆ ನೀಡಿ ಭತ್ತ ಖರೀದಿ; ಸಚಿವ ಕೋಟ

ಕೋಟ ಶ್ರೀನಿವಾಸ ಪೂಜಾರಿ
  • 13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಯ ಗುರಿ; ಸದ್ಯದಲ್ಲೇ ಖರೀದಿ ಕೇಂದ್ರ ಆರಂಭ
  • ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

“ಕರಾವಳಿಯ ಮೂರು ಜಿಲ್ಲೆಗಳಿಗೆ ಪಡಿತರದಲ್ಲಿ ಕುಚಲಕ್ಕಿ ವಿತರಣೆ ಮಾಡಲು ಸಾಕಾಗುವಷ್ಟು ಕುಚಲಕ್ಕಿಯ ಭತ್ತ ಕರಾವಳಿ ಭಾಗದಲ್ಲಿ ವರ್ಷ ಪೂರ್ತಿ ಸಿಗದ ಕಾರಣ, ಕ್ವಿಂಟಾಲ್‌ಗೆ ₹2,540 ರೂ. ಬೆಂಬಲ ಬೆಲೆ ನೀಡಿ ಇತರೆ ಜಿಲ್ಲೆಗಳಿಂದ ಖರೀದಿಲಾಗುವುದು” ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಊಟ ಮಾಡುವ ಕುಚಲಕ್ಕಿಯನ್ನು ಪಡಿತರ ಮೂಲಕ ಕೊಡಬೇಕು ಎಂದು ಕರಾವಳಿ ಜಿಲ್ಲೆಗಳ ಜನರು ಬೇಡಿಕೆ ಇಟ್ಟಿದ್ದರು. ಬೇರೆ ಬೇರೆ ಕಾರಣಗಳಿಂದ ಅದರ ಜಾರಿ ಸಾಧ್ಯವಾಗಿರಲಿಲ್ಲ. ಅವರ ಬೇಡಿಕೆ ಗಮನಿಸಿ ಕುಚಲಕ್ಕಿಯನ್ನು ಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.

Eedina App

“ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಭತ್ತಕ್ಕೆ ಹೆಚ್ಚುವರಿ ಮೊತ್ತ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಬಲ ಬೆಲೆಗೆ ಪ್ರತಿ ಕ್ವಿಂಟಾಲ್ ಗೆ 2,040 ರೂ. ಕೊಡಲಾಗುತ್ತಿದೆ” ಎಂದರು.

“ನಾವು ಕುಚಲಕ್ಕಿ ಮಾಡುವ ತಳಿಗಳಾದ ಜಯ, ಅಭಿಲಾಷ, ಜ್ಯೋತಿ, ಎಂ.ಒ 4ಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದೇವೆ.  13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಯ ಗುರಿ ಇದ್ದು, ಈ ಪೈಕಿ 8.50 ಲಕ್ಷ ಕ್ವಿಂಟಾಲ್ ಭತ್ತ ಬರುವ ಅಂದಾಜಿದೆ. ಇದನ್ನು ವಿತರಣೆ ಮಾಡಲಾಗುವುದು” ಎಂದು ಹೇಳಿದರು.

AV Eye Hospital ad

“ನಾವು ಕೊಡುವ ಬೆಂಬಲ ಬೆಲೆಗೆ ಭತ್ತ ಸಿಗದ ಕಾರಣ ಸಿಎಂ ಪ್ರತಿ ಕ್ವಿಂಟಾಲಿಗೆ 500 ರೂ. ಹೆಚ್ಚುವರಿ ಬೆಲೆ ಕೊಡುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಅದಕ್ಕಾಗಿ 132 ಕೋಟಿ ರೂ. ಆಗುವ ಅಂದಾಜಿದೆ. ಈ ಹಿನ್ನೆಲೆ ಆಹಾರ ಇಲಾಖೆ ಮತ್ತು ಕೃಷಿ ಇಲಾಖೆ ಜೊತೆಗೆ ಸಭೆ ಮಾಡಿದ್ದೇನೆ” ಎಂದರು.

ಈ ಸುದ್ದಿ ಓದಿದ್ದೀರಾ? ಪ್ರಾದೇಶಿಕತೆಗೆ ಮೆರುಗು | ಮನಗೆದ್ದ ಕರಾವಳಿಯ ಯುವ ನಿರ್ದೇಶಕನ 'ಬಾಯಿಲ್ಡ್‌ ರೈಸ್'

“ಡಿಸೆಂಬರ್ 1ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಚಲಕ್ಕಿ ಪೂರಕವಾಗಿ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯುತ್ತೇವೆ. ಕ್ವಿಂಟಲ್‌ಗೆ 2,540 ರೂ. ಬೆಂಬಲ ಬೆಲೆ ನೀಡಿ ಖರೀದಿ ಮಾಡಿ ಭತ್ತವನ್ನು ನಮ್ಮ ಊರಲ್ಲೇ ಸಂಸ್ಕರಣೆ ಮಾಡುತ್ತೇವೆ. ಕೆಂಪು ಕುಚಲಕ್ಕಿಯ ಭತ್ತವನ್ನೇ ಖರೀದಿ ಮಾಡಲಾಗುವುದು. ಜನವರಿ ಒಂದರಿಂದ ಕರಾವಳಿಯ ಮೂರು ಜಿಲ್ಲೆಗಳ ಪಡಿತರದಾರರಿಗೆ ಐದು ಕೆ.ಜಿ ಕುಚಲಕ್ಕಿ ವಿತರಣೆ ಮಾಡಲಾಗುವುದು” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app