ಒಬಿಸಿ ಮೀಸಲಾತಿ: ಭಕ್ತವತ್ಸಲ ಕಮಿಟಿ ಶಿಫಾರಸಿಗೆ ಅನುಮೋದನೆ ನೀಡಿದ ಬೊಮ್ಮಾಯಿ ಸಂಪುಟ

  • ಎಸಿಬಿ ರದ್ದತಿ ವಿಚಾರದಲ್ಲಿ ಕಾನೂನು ತಜ್ಞರ ಸಲಹೆಯಂತೆ ನಡೆಯಲು ನಿರ್ಧಾರ
  • ನಂಜುಂಡಪ್ಪ ವರದಿ ಮರುಪರಿಶೀಲಿಸಿ ಹಿಂದುಳಿದ ತಾಲೂಕು ಗುರುತಿಸಲು ಕ್ರಮ 

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ಸಂಬಂಧ ಭಕ್ತವತ್ಸಲ ಸಮಿತಿ ನೀಡಿದ ವರದಿ ಶಿಫಾರಸಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಇಂದು(ಶುಕ್ರವಾರ) ವಿಧಾನಸೌಧದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ನಿರ್ಣಯವಾಗಿದೆ. ಸಂಪುಟ ಸಭೆ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಸಭೆಯ ಇತರ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಭಕ್ತವತ್ಸಲ ಸಮಿತಿ ವರದಿಯ ಪ್ರಾಥಮಿಕ ಶಿಫಾರಸುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೀಸಲಾತಿ ನಿಯಮಾನುಸಾರ ಒಟ್ಟಾರೆ ಮೀಸಲಾತಿಯಲ್ಲಿ ಎಸ್ಸಿ-ಎಸ್ಟಿ, ಒಬಿಸಿ ವರ್ಗಗಳನ್ನು ಒಳಗೊಂಡಂತೆ ಶೇಕಡಾ 50% ಮೀರದಂತೆ ಮೀಸಲಾತಿ ಜಾರಿ ಮಾಡಲಾಗುತ್ತದೆ. ಅದರಂತೆ ಒಬಿಸಿ ಸಮುದಾಯಕ್ಕೆ ಶೇ.33ರಷ್ಟು ಮೀಸಲಾತಿ ಒದಗಿಸಲು ಒಪ್ಪಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಇವೆಲ್ಲದರ ಜೊತೆಗೆ ಬಿಬಿಎಂಪಿ ಮೇಯರ್, ಉಪಮೇಯರ್ ಮೀಸಲಾತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಬಗ್ಗೆ ಸುಪ್ರೀಂಕೋರ್ಟ್ ಗಮನಕ್ಕೆ ತರಲು ಸಂಪುಟ ಒಪ್ಪಿಗೆ ನೀಡಿದ್ದಾಗಿಯೂ ಮಾಧುಸ್ವಾಮಿ ಹೇಳಿದರು.

ಇನ್ನುಳಿದಂತೆ ಎಸಿಬಿ ರದ್ದು ಮಾಡುವ ವಿಚಾರ ಬಗೆಗೂ ಇಂದಿನ(ಶುಕ್ರವಾರ) ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು ಅಡ್ವೋಕೇಟ್ ಜನರಲ್, ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಸಚಿವರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ಎಸಿಬಿ ರದ್ದು | ಚರ್ಚೆಯ ನಂತರ ಮುಂದಿನ ತೀರ್ಮಾನ: ಸಿಎಂ ಬಸವರಾಜ ಬೊಮ್ಮಾಯಿ

ಉಳಿದಂತೆ ಸಂಪುಟ ಸಭೆಯ ಇತರ ಪ್ರಮುಖ ನಿರ್ಧಾರಗಳು ಈ ಕೆಳಗಿನಂತಿವೆ. 
•    ಶ್ರೀಶೈಲದಲ್ಲಿ ಯಾತ್ರಿ ನಿವಾಸ ಕಟ್ಟಲು 85 ಕೋಟಿ ಕೊಡಲು ತೀರ್ಮಾನ
•    ಅಂಜನಾದ್ರಿ ಬೆಟ್ಟದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ಕೊಡಲು ಒಪ್ಪಿಗೆ
•    ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಖರೀದಿ ಗೆ 539 ಕೋಟಿ ಬಿಡುಗಡೆ ಗೆ ಅಸ್ತು 
•    ನಂಜುಂಡಪ್ಪ ವರದಿ ಪುನರ್‌ ಪರಿಶೀಲಿಸಿ ಶಿಕ್ಷಣ ಹಾಗು ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕು ಗುರುತಿಸಲು ನಿರ್ಧಾರ
•     ಡಿಎಡ್ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಳ ವಯೋಮಿತಿ ಏರಿಕೆ
•    ಎಸ್ಸಿ ಎಸ್ಟಿ– 47 ವರ್ಷ, ಓಬಿಸಿ– 45 ವರ್ಷ, ಜನರಲ್- 42 ವರ್ಷ ನಿಗದಿ

ನಿಮಗೆ ಏನು ಅನ್ನಿಸ್ತು?
0 ವೋಟ್