ಪಿಎಫ್ಐ ನಿಷೇಧ | ಸಾಮರಸ್ಯ ಕದಡುವ ಸಂಘಟನೆ ನಿಷೇಧ ಸ್ವಾಗತಾರ್ಹ: ಕಾಂಗ್ರೆಸ್

Congress
  • ಸಾಮಾಜಿಕ ರಚನೆಗೆ ಅಪಾಯವುಂಟುಮಾಡುವ ಸಂಘಟನೆಯನ್ನು ನಿಷೇಧಿಸಲಿ: ಕಾಂಗ್ರೆಸ್
  • ‘ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬಾಯಿ ಬಿಡುತ್ತಿಲ್ಲ ಯಾಕೆ’: ಬಿಜೆಪಿ ಪ್ರಶ್ನೆ

‘ಸಮಾಜದ ಸಾಮರಸ್ಯ ಕದಡುವ ಸಂಘಟನೆ ನಿಷೇಧಿಸುವುದನ್ನು ಪಕ್ಷ ಸ್ವಾಗತಿಸುತ್ತದೆ” ಎಂದು ಪಿಎಫ್‌ಐ ಸಂಘಟನೆ ನಿಷೇಧದ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್, “ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ. ಪಿಎಫ್ಐ ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆ ನಿಷೇಧಿಸುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ” ಎಂದು ಹೇಳಿದೆ.

Eedina App

“ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿರುವ ಮತ್ತು ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ರಚನೆಗೆ ಅಪಾಯವನ್ನು ಉಂಟುಮಾಡುವ ಯಾವುದೇ ಸಂಘಟನೆಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕಬೇಕು. ಅದರ ಬಗ್ಗೆ ಎರಡನೇ ಆಲೋಚನೆ ಇಲ್ಲ” ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

AV Eye Hospital ad

‘ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬಾಯಿ ಬಿಡುತ್ತಿಲ್ಲ ಯಾಕೆ’: ಬಿಜೆಪಿ ಪ್ರಶ್ನೆ

“ಪಿಎಫ್‌ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲ ದೇಶ ವಿರೋಧಿ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆಂಗಾವಲಾಗಿ ನಿಂತಿತ್ತು. ನಿಷೇಧದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಏಕೆ ಇನ್ನೂ ಬಾಯಿ ತೆರೆದಿಲ್ಲ? ಮತಬ್ಯಾಂಕ್‌ ಕಳೆದುಕೊಳ್ಳುವ ಭಯವೇ” ಎಂದು ಬಿಜೆಪಿ ಪ್ರಶ್ನಿಸಿದೆ.

“ದೇಶಕ್ಕೆ ದೇಶವೇ ಪಿಎಫ್ಐ ಮೇಲಿನ ನಿಷೇಧವನ್ನು ಸ್ವಾಗತಿಸುತ್ತಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವಾಗ ತೆಗೆದುಕೊಂಡ ನಿರ್ಧಾರವನ್ನು ದೇಶ ಮರೆತಿಲ್ಲ. ಪಿಎಫ್ಐ ಮೇಲಿನ 175 ಪ್ರಕರಣಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತ್ತು. ನಿಮ್ಮದು ಉಗ್ರಸ್ನೇಹಿ ಸರ್ಕಾರವಾಗಿತ್ತೇ” ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app