ಪಿಎಫ್‌ಐ ನಿಷೇಧ | ಸಾಮರಸ್ಯ ಕದಡುವ ಆರ್‌ಎಸ್‌ಎಸ್‌ ಬ್ಯಾನ್ ಮಾಡಿ: ಸಿದ್ದರಾಮಯ್ಯ ಆಗ್ರಹ

  • ಸಾಮರಸ್ಯ ಕದಡುವವರೆಲ್ಲರ ವಿರುದ್ಧವೂ ಕ್ರಮ ಜರುಗಿಸಲಿ
  • ರಾಜಕೀಯಕ್ಕಿಂತ ಸಮಾಜಮುಖಿ ನಿರ್ಧಾರ ಮುಖ್ಯ

ಸಮಾಜದ ಶಾಂತಿ ಹಾಳು ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮೇಲೂ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ಪಿಎಫ್ಐ ಸಂಘಟನೆ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ, "ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಪಿಎಫ್ಐನಂತೆಯೇ ಆರ್‌ಎಸ್‌ಎಸ್‌ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

"ಸಮಾಜಕ್ಕೆ ಕಂಟಕವಾಗಿರುವವರು ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸಾಮರಸ್ಯ ಹಾಳು ಮಾಡುತ್ತಿರುವವರ ಮೇಲೆ ಯಾವಾಗ ಕ್ರಮ ಕೈಗೊಂಡರೂ ಉತ್ತಮವೇ. ಈ ಮಾತನ್ನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಪಿಎಫ್‌ಐ ನಿಷೇಧ | ವಿಧ್ವಂಸಕ ಕೃತ್ಯಗಳಿಗೆ ದೇಶದಲ್ಲಿ ಅವಕಾಶವಿಲ್ಲ: ಸಿಎಂ ಬೊಮ್ಮಾಯಿ

"ನಾವು ನುಡಿದಂತೆ ನಡೆದಿದ್ದೇವೆ ಎನ್ನುವ ಬಿಜೆಪಿಗರು, ಇಷ್ಟು ದಿನ ಬ್ಯಾನ್ ಮಾಡುವ ಕ್ರಮವನ್ನೇಕೆ ತೆಗೆದುಕೊಂಡಿರಲಿಲ್ಲ" ಎಂದು ಅವರು ಕಿಡಿಕಾರಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್