ಇನ್ವೆಸ್ಟ್ ಕರ್ನಾಟಕ | ಜಾಗತಿಕ ಉದ್ದಿಮೆಗಳಿಗೆ ಬೆಂಗಳೂರೇ ಗಮ್ಯಸ್ಥಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Basavaraj Bommai
  • ಹೂಡಿಕೆದಾರರಿಗೆ ಕೆಲವೇ ದಿನಗಳಲ್ಲಿ ರಾಜ್ಯ ಮಟ್ಟದ ಅನುಮೋದನೆ 
  • ಬೆಂಗಳೂರಿನಾಚೆ ಹೂಡಿಕೆಗೆ ಸಾಕಷ್ಟು ಕಂಪನಿಗಳ ಆಸಕ್ತಿ

‘ಜಾಗತಿಕ ಉದ್ದಿಮೆಗಳಿಗೆ ಬೆಂಗಳೂರೇ ಗಮ್ಯವಾಗಿದೆ. ಎಲ್ಲ ಜಾಗತಿಕ ಉದ್ದಿಮೆಗಳ ಹಾದಿಗಳು ಬೆಂಗಳೂರಿಗೆ ಬಂದು ಸೇರುತ್ತಿವೆ. ನಾಳೆಯಿಂದ (ನ.2) ಪ್ರಾರಂಭವಾಗುವ ಮೂರು ದಿನಗಳ 'ಇನ್ವೆಸ್ಟ್ ಕರ್ನಾಟಕ' ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. 

ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ನಡೆಯುವ ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

Eedina App

“ಇನ್ವೆಸ್ಟ್ ಕರ್ನಾಟಕ ಇಡೀ ಜಗತ್ತಿನ ಗಮನ ಸೆಳೆಯಲಿದೆ. ಜಗತ್ತಿನ ಹೂಡಿಕೆಯೂ ಇಲ್ಲಿಗೆ ಬರುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯ ವಾತಾವರಣ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಗೆ ಒಂದು ಭದ್ರ ಬುನಾದಿ ಹಾಕಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಇದೊಂದು ಬಹಳ ಮಹತ್ವದ ಸಮ್ಮೇಳನ. ಎಲ್ಲ ಜಾಗತಿಕ ಹಾಗೂ ದೇಶದ ಎಲ್ಲ ಬಂಡವಾಳ ಹೂಡಿಕೆದಾರರಿಗೆ ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಹಾಗೂ ಐಟಿ-ಬಿಟಿ ಪರಿಣಿತರಿಗೆ, ಸ್ಟಾರ್ಟ್ ಅಪ್‌ಗಳಿಗೆ ಹಾಗೂ ಯುವ ಇಂಜಿನಿಯರ್‌ಗಳಿಗೆ, ತಂತ್ರಜ್ಞರಿಗೆ ಇದರಲ್ಲಿ ಭಾಗವಹಿಸಲು ಸ್ವಾಗತ ಕೋರುತ್ತೇನೆ” ಎಂದರು. 

AV Eye Hospital ad

ಕರ್ನಾಟಕ ಹಾಗೂ ಹೂಡಿಕೆದಾರರ ಬದ್ಧತೆ

“₹5 ಲಕ್ಷ ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ‌ ಇದೆ. ಈ ಪೈಕಿ ಈಗಾಗಲೇ ₹2.8 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇದು ನಮ್ಮ ರಾಜ್ಯದ ಹಾಗೂ ಹೂಡಿಕೆದಾರರ ಬದ್ಧತೆ. ಅವರಿಗೆ ನಾಳೆ ಹೂಡಿಕೆಯ ಪ್ರಮಾಣ ಪತ್ರ ನೀಡುತ್ತಿದ್ದು, ಹೊಸದಾಗಿ ಬಂಡವಾಳ ಹೂಡಿಕೆದಾರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯ ಮಟ್ಟದ ಅನುಮೋದನೆ ನೀಡಲಾಗುವುದು. ಕರ್ನಾಟಕ ಔದ್ಯೋಗಿಕ ರಂಗದಲ್ಲಿ ಪ್ರಗತಿಯ ದಾಪುಗಾಲನ್ನು ಇಟ್ಟಿದ್ದು, ನಾಳಿನ ಸಮಾವೇಶ ಅದಕ್ಕೆ ಸಾಕ್ಷಿಯಾಗಲಿದೆ” ಎಂದರು. 

ಬೆಂಗಳೂರಿನಿಂದ ಹೊರಗೆ ಹೂಡಿಕೆಗೆ ಕಂಪನಿಗಳ ಆಸಕ್ತಿ

“ಬೆಂಗಳೂರಿನಾಚೆ ಹೂಡಿಕೆಗೆ ಸಾಕಷ್ಟು ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ. ರಾಮನಗರ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಕಲಬುರಗಿ, ಮೈಸೂರು ಎಲ್ಲ ಕಡೆ ಬಂಡವಾಳ ಹೂಡಲು ಕೈಗಾರಿಕೆಗಳು ಬರುತ್ತಿವೆ. ಪ್ರಾದೇಶಿಕ ಅಡೆತಡೆಗಳನ್ನು ದಾಟಿ ಇಂದು ಕೈಗಾರಿಕೆಗಳು ಬರುತ್ತಿವೆ. ಬಿಯಾಂಡ್ ಬೆಂಗಳೂರು ಕನಸು ನನಸಾಗುತ್ತಿದೆ. ಸಮಗ್ರ ಕರ್ನಾಟಕದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ” ಎಂದು ಬೊಮ್ಮಾಯಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ‘ಕನ್ನಡ ವಿರೋಧಿ ಬಿಜೆಪಿ’; ಕನ್ನಡ ರಾಜ್ಯೋತ್ಸವದಂದೇ ಕಾಂಗ್ರೆಸ್‌ನಿಂದ ಟ್ವೀಟ್ ದಾಳಿ

ಕೇಂದ್ರಕ್ಕೆ ಒಂದು ಟ್ರಿಲಿಯನ್ ಡಾಲರ್ ಕೊಡುಗೆ

“ಎಲ್ಲ ದೃಷ್ಟಿಯಿಂದ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ನವ ಕರ್ನಾಟಕ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಧಾನಿಗಳ 5 ಟ್ರಿಲಿಯನ್ ಆರ್ಥಿಕತೆಯ ಕನಸಿಗೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ” ಎಂದರು.

ರಾಜ್ಯದ ಔದ್ಯೋಗಿಕ ರಂಗದಲ್ಲಿ ಪೈಪೋಟಿ

“1992ರಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣವಾದ ನಂತರ ಇಡೀ ಜಗತ್ತಿನ ಔದ್ಯೋಗಿಕ ಕ್ಷೇತ್ರ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಇದರ ಜೊತೆಗೆ ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದವಾಯಿತು. ಇವೆರಡರ ನಂತರ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಉಂಟಾಗಿದೆ. ಇದರಿಂದ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ತಯಾರಾಗಿದ್ದು ಇಡೀ ಜಗತ್ತಿನ ಮಾರುಕಟ್ಟೆಯಲ್ಲಿ ಮಾರುವ ವಾತವರಣವಿದೆ. ಔದ್ಯೋಗಿಕ ರಂಗದ ಪೈಪೋಟಿ ಸ್ಥಳೀಯ ಎನ್ನುವುದಕ್ಕಿಂತ ಜಾಗತಿಕವಾಗಿ ಹೆಚ್ವಿದೆ” ಎಂದರು.

“ಭಾರತ ಪ್ರಗತಿಪರವಾದ ದೇಶ; ಇಲ್ಲಿ ಆರ್ಥಿಕ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ಆರ್ಥಿಕ ಹಿಂಜರಿತ ಇಡೀ ಜಗತ್ತಿನಲ್ಲಿ ಆಗಿದೆ. ಕೋವಿಡ್ ಮುಕ್ತವಾದ ನಂತರ ಆರ್ಥಿಕ ಬೆಳವಣಿಗೆ ಕೆಲವು ದೇಶಗಳಲ್ಲಿ ಇಂದಿಗೂ ಪ್ರಾರಂಭವಾಗಿಲ್ಲ. ಕೆಲವು ದೇಶಗಳು ಹಿಂದುಳಿದಿವೆ, ಕೆಲವು ಪ್ರಬಲ ರಾಷ್ಟ್ರಗಳಾದ ಅಮೆರಿಕಾ, ಕೆನಡಾ, ಯೂರೋಪಿನ ಎಲ್ಲ ದೇಶಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗಿವೆ. ಇಂಥ ಸನ್ನಿವೇಶದಲ್ಲಿ ಭಾರತ ಶೇ.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸಿರುವುದು ಭರವಸೆಯ ಸಂದೇಶ ಎಂದು ಭಾವಿಸುತ್ತೇನೆ” ಎಂದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app