ಪಿಎಫ್ಐ ನಿಷೇಧಿಸಿದ ಮಾತ್ರಕ್ಕೆ ಸಮಾಜ ಘಾತುಕ ಕಾರ್ಯ ನಿಲ್ಲುತ್ತದೆಯೇ?: ಎಚ್ ಡಿ ಕುಮಾರಸ್ವಾಮಿ ಪ್ರಶ್ನೆ

  • ಬಂಧನದ ಹಿಂದಿನ ಅಸಲಿಯತ್ತನ್ನು ಜನರಿಗೆ ತಿಳಿಸಿ
  • ಬಂಧಿಸಿದಾಕ್ಷಣಕ್ಕೆ ವಿದ್ರೋಹ ಘಟನೆಗಳು ನಿಲ್ಲುತ್ತವೆಯೇ? 

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಮೂಲಭೂತ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಪಿಎಫ್ಐ ಸಂಘಟನೆ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಎಚ್ ಡಿ ಕುಮಾರಸ್ವಾಮಿ, "ಪಿಎಫ್ ಐ ಸಂಘಟನೆ ನಿಷೇಧ ಮಾಡಿದ ಮಾತ್ರಕ್ಕೆ ಸಮಾಜಘಾತುಕ ಕೆಲಸ ನಿಲ್ಲಲ್ಲ. ಅದು ನಿಲ್ಲುತ್ತದೆ ಅನ್ನೋದಕ್ಕೆ ಏನು ಖಾತರಿ ಇದೆ?" ಎಂದು ಕೇಳಿದ್ದಾರೆ.

ರಾಮನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, "ಸಮಾಜ ದ್ರೋಹಿ, ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಯಾವುದೇ ಸಂಘಟನೆ ಪಾಲ್ಗೊಂಡಿದ್ದರೂ ಅದನ್ನು ನಿಷೇಧಿಸಬೇಕು. ಯಾರೇ ತಪ್ಪು ಮಾಡಿದರೂ ಉಗ್ರವಾದ ಕ್ರಮವನ್ನೇ ಕೈಗೊಳ್ಳಬೇಕು" ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? : ಪಿಎಫ್ಐ ನಿಷೇಧದ ಮಾನದಂಡಗಳು ಆರ್‌ಎಸ್ಎಸ್-ಭಜರಂಗದಳ ನಿಷೇಧಕ್ಕೂ ಅನ್ವಯಿಸುತ್ತವೆ: ಎಚ್ ಸಿ ಮಹದೇವಪ್ಪ

"ಜನರಿಗೆ ಪಿಎಫ್ಐ ಕಾರ್ಯಕರ್ತರ ಬಂಧನ ವಿಚಾರದ ಹಿಂದಿನ ತೀವ್ರತೆ ಮನದಟ್ಟು ಮಾಡಬೇಕಾದರೆ ಈಗಾಗಲೇ ಬಂಧನಕ್ಕೊಳಗಾಗಿರುವ ಪಿಎಫ್ಐ ಕಾರ್ಯಕರ್ತರು ನಡೆಸಿರುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಜನರ ಮುಂದಿಡಬೇಕು. ಹೀಗಾದಾಗ ಅವರ ಪರ ಸಹಾನುಭೂತಿ ಇಟ್ಟುಕೊಂಡು ಪ್ರತಿಭಟನೆ ಮಾಡುವವರಿಗೆ ವಾಸ್ತವತೆ ಮನದಟ್ಟಾಗುತ್ತದೆ" ಎಂದು ಕುಮಾರಸ್ವಾಮಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app