
- ಕಲಿಕೆ ಹೆಸರಿನಲ್ಲಿ ಪರಿಶಿಷ್ಟರ ಕಾಸು ಹೊಡೆಯಲು ಸರ್ಕಾರ ಹೊರಟಿದೆ
- ದಲಿತರ ಅನುದಾನದ ಹಣ ದುರ್ಬಳಕೆಯನ್ನು ತಡೆಯಲು ಆಗ್ರಹ
ವೇದಗಣಿತ ಕಲಿಕೆ ಹೆಸರಿನಲ್ಲಿ ದಲಿತರ ಮಕ್ಕಳಿಗೆ ಬಿಜೆಪಿ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಸಮಾವೇಶಗಳ ಮೂಲಕ ದಲಿತರ ಓಲೈಕೆಗೆ ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರ ಈಗ ಶಿಕ್ಷಣದಲ್ಲೂ ದಲಿತ ಮಕ್ಕಳಿಗೆ ಅನ್ಯಾಯ ಎಸಗಲು ಹೊರಟಿದೆ ಎನ್ನುವುದು ಕಾಂಗ್ರೆಸ್ ಆರೋಪ.
ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡಿರುವ ಕಾಂಗ್ರೆಸ್ ಬಿಜೆಪಿ ಮೇಲೆ ಟ್ವೀಟ್ ಪ್ರಹಾರ ನಡೆಸಿದೆ. ಕಾಂಗ್ರೆಸ್ ಟ್ವೀಟ್ ಸಾರಾಂಶ ಹೀಗಿದೆ.
ಉಪಯೋಗಕ್ಕೆ ಬಾರದ ಕೆಲಸಗಳಿಗೆ ದಲಿತರ ಹಣ ದುರ್ಬಳಕೆ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದಲಿತರ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ?
— Karnataka Congress (@INCKarnataka) September 17, 2022
ಈಗಾಗಲೇ ದಲಿತರ ವಿಶೇಷ ಅನುದಾನವನ್ನು ಕಡಿತಗೊಳಿಸಿದೆ, ಅಲ್ಪ ಅನುದಾನವನ್ನೂ ಬೇರೆಡೆ ಬಳಸಿದೆ.
ಈಗ ವೇದಗಣಿತ ಕಲಿಕೆ ಎಂಬ ಮತ್ತೊಂದು ಮೋಸ ಮಾಡುತ್ತಿದೆ.@BSBommai ಈ ದುರ್ಬಳಕೆ ತಡೆಯಲು ನಿಮ್ಮಿಂದ ಅಸಾದ್ಯವೇ? pic.twitter.com/1LC2wKTKg1
"ಉಪಯೋಗಕ್ಕೆ ಬಾರದ ಕೆಲಸಗಳಿಗೆ ದಲಿತರ ಹಣ ದುರ್ಬಳಕೆ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದಲಿತರ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ? ಈಗಾಗಲೇ ದಲಿತರ ವಿಶೇಷ ಅನುದಾನವನ್ನು ಕಡಿತಗೊಳಿಸಿದೆ, ಅಲ್ಪ ಅನುದಾನವನ್ನೂ ಬೇರೆಡೆ ಬಳಸಿದೆ. ಈಗ ವೇದಗಣಿತ ಕಲಿಕೆ ಎಂಬ ಮತ್ತೊಂದು ಮೋಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಈ ದುರ್ಬಳಕೆ ತಡೆಯಲು ನಿಮ್ಮಿಂದ ಅಸಾಧ್ಯವೇ? ಎಂದು ಕಾಂಗ್ರೆಸ್ ಕುಟುಕಿದೆ.
ಏನಿದು ವೇದಗಣಿತ?
ವೇದ ಗಣಿತ ಕಲಿಕೆ ಎನ್ನವುದು ಸಂಸ್ಕೃತ ಗಣಿತ ಸೂತ್ರ. ಅಂದರೆ, ನಾವು ಈಗ ಬಳಸುವ ಗಣಿತ ಸೂತ್ರವನ್ನು ವೇದ ಕಾಲದಲ್ಲಿ ಸಂಸ್ಕೃತ ಶ್ಲೋಕದ ಮಾದರಿ ಸೂತ್ರವನ್ನು ಕಲಿಸಿ, ಬಾಗ್ಯ ಕಲಿಕಾ ವಸ್ತುಗಳ ಸಹಾಯವಿಲ್ಲದೆ ಗಣಿತ ಸಮಸ್ಯೆಯನ್ನು ಮನಸ್ಸಿನಲ್ಲೇ ಬಗೆಹರಿಸುವ ವಿಧಾನ.
ಈ ಸುದ್ದಿ ಓದಿದ್ದೀರಾ? : ಮುರುಘಾ ಶ್ರೀ ಪ್ರಕರಣ | ಮಠದ ಆಸ್ತಿ ದುರುಪಯೋಗದಂತೆ ಮೇಲುಸ್ತುವಾರಿ ಸಮಿತಿ ರಚಿಸಿ: ನ್ಯಾಯಮೂರ್ತಿಗಳಿಗೆ ಯತ್ನಾಳ್ ಪತ್ರ
ವೇದ ಕಾಲದ ಬಳಿಕ ಕಳೆದು ಹೋಗಿದ್ದ ಈ ಶಾಸ್ತ್ರ ಪ್ರಕಾರವನ್ನು 1911ರಿಂದ 1917ರ ಅವಧಿಯಲ್ಲಿ ಜಗದ್ಗುರು ಸ್ವಾಮಿ ಶ್ರೀ ಭಾರತೀ ಕೃಷ್ಣ ತೀರ್ಥಜಿ ಮಹಾರಾಜರು ವೇದಾಧ್ಯಯನ ಮಾಡುವ ವೇಳೆ ಮರಳಿ ಕಂಡುಕೊಂಡು, ಆನಂತರ 1957ರಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಎಂಬ ಪುಸ್ತಕವನ್ನು ಬರೆದರು. ಅದನ್ನು ಪ್ರಚರುಪಡಿಸಿದರೆಂಬುವುದು ಈಗಿರುವ ಉಲ್ಲೇಖ.