ಒಂದು ನಿಮಿಷದ ಓದು: ಅಮಿತ್ ಶಾ- ನಳಿನ್‌ ಕುಮಾರ್ ಕಟೀಲ್ ಭೇಟಿ; ಎನ್‌ಐಎ ತನಿಖೆ ಚುರುಕುಗೊಳಿಸುವಂತೆ ಮನವಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿದರು. ಇತ್ತೀಚೆಗೆ ಹತ್ಯೆಗೊಳಗಾದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಪ್ರಕರಣದ ತನಿಖೆಯನ್ನು ಗೃಹ ಸಚಿವಾಲಯ ಎನ್.ಐ.ಎಗೆ ಒಪ್ಪಿಸಿರುವುದಕ್ಕೆ ನಳಿನ್‌ ಕುಮಾರ್‌  ಧನ್ಯವಾದ ಸಮರ್ಪಿಸಿದರು. ಅಲ್ಲದೆ, ಈ ಪ್ರಕರಣದ ತನಿಖೆಯಲ್ಲಿ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ನಳಿನ್ ಕುಮಾರ್ ಕಟೀಲ್ ಅಮಿತ್‌ ಶಾ ಬಳಿ ವಿನಂತಿಸಿದರು.

ಈ ವಿಚಾರವಾಗಿ ಸಂಸದರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಎನ್.ಐ.ಎ ಅಧಿಕಾರಿಗಳಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು, ಜೊತೆಗೆ ರಾಜ್ಯದಲ್ಲಿ ಎನ್.ಐ.ಎಗೆ ವಹಿಸಿರುವ ಇತರ ಪ್ರಕರಣಗಳ ತನಿಖೆಯನ್ನೂ ಶೀಘ್ರವಾಗಿ ಕೈಗೊಂಡು ಅಪರಾಧ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ನೀಡಲು ಕ್ರಮ ಜರುಗಿಸುವುದಾಗಿ ಅಮಿತ್‌ ಶಾ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್