ಒಂದು ನಿಮಿಷದ ಓದು| ಬಿಜೆಪಿ ಭ್ರಷ್ಟೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ: ಕಾಂಗ್ರೆಸ್ ಟೀಕೆ

ಭಾರತೀಯ ಜನತಾ ಪಕ್ಷದ ಭ್ರಷ್ಟೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್‍‌ನಲ್ಲಿ ಟೀಕೆ ಮಾಡಿದೆ.

ಬಿಜೆಪಿ ಭ್ರಷ್ಟೋತ್ಸವ 'ಹ್ಯಾಷ್‌ಟ್ಯಾಗ್' ಬಳಸಿ ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿಲಾಗಿದ್ದು, “ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ವಯಂ ಕಲ್ಯಾಣ ಇಲಾಖೆಯಾಗಿರುವಾಗ ಗಂಗಾ ಕಲ್ಯಾಣದಲ್ಲಿ ಭ್ರಷ್ಟರ ಕಲ್ಯಾಣ ಆಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ! ಇಲಾಖಾ ತನಿಖೆಯಲ್ಲಿ ಮೇಲ್ನೋಟದಲ್ಲೇ ಹಗರಣ ಸಾಭೀತಾಗಿದೆ, ಹೀಗಿದ್ದೂ ಭ್ರಷ್ಟರ ರಕ್ಷಣೆಗಾಗಿ ಉನ್ನತ ತನಿಖೆಗೆ ವಹಿಸದೆ ಸರ್ಕಾರ ಹಿಂದೇಟು ಹಾಕುತ್ತಾ ದಲಿತರಿಗೆ ಅನ್ಯಾಯವೆಸಗುತ್ತಿದೆ” ಎಂದು ಆರೋಪ ಮಾಡಿದೆ.

“ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಭ್ರಷ್ಟಾಚಾರದ ಸೋಂಕು ಕೋವಿಡ್‌ಗಿಂತಲೂ ಅಪಾಯಕಾರಿಯಾಗಿ ವ್ಯಾಪಿಸಿದೆ. ನಿಗಮ, ಮಂಡಳಿಗಳಲ್ಲಿ ಬಿಜೆಪಿ ಭ್ರಷ್ಟೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬಡವರ, ಹಿಂದುಳಿದವರ ಏಳಿಗೆಯ ಬದಲು ಭ್ರಷ್ಟರ ಏಳಿಗೆಯಾಗುತ್ತಿದೆ. ಬಡವರನ್ನು ತಲುಪಬೇಕಾದ ನೂರಾರು ಕೋಟಿ ಅನುದಾನ ಬಿಜೆಪಿ ಭ್ರಷ್ಟರ ತಿಜೋರಿ ಸೇರುತ್ತಿದೆ” ಎಂದು ಟೀಕೆ ಮಾಡಿದೆ.

ರಾಷ್ಟ್ರ ಧ್ವಜವನ್ನು ಕರವಸ್ತ್ರದಂತೆ ಭಾವಿಸಿರುವ ಬಿಜೆಪಿ 

“ಭಾರತೀಯ ಜನತಾ ಪಕ್ಷವು ರಾಷ್ಟ್ರ ಧ್ವಜವನ್ನು ಕರವಸ್ತ್ರದಂತೆ ಭಾವಿಸಿದೆ. ಸ್ವಾಭಿಮಾನದ ಸಂಕೇತವಾದ ತಿರಂಗಾಕ್ಕೆ ಅದರದ್ದೇ ಗೌರವ, ನೀತಿ, ನಿಯಮಗಳಿವೆ. ಜನಸಾಮಾನ್ಯರು ದೋಷಪೂರಿತ ಧ್ವಜಗಳನ್ನು ಹಾರಿಸಿದಲ್ಲಿ ಅದರ ಹೊಣೆಯನ್ನು, ಅವರ ಪಾಲಿನ ಶಿಕ್ಷೆಯನ್ನು ಬಿಜೆಪಿ ಹೊರುತ್ತದೆಯೇ? ಧ್ವಜವನ್ನು ಟವೆಲ್‌ಗಿಂತಲೂ ಕಳಪೆಯಾಗಿ ತಯಾರಿಸಿದವರಿಗೆ ಯಾವ ಶಿಕ್ಷೆ” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್