ಗೌರಿ ಗಣೇಶ ಹಬ್ಬದ ನೆಪ | ಬಿಜೆಪಿಯ ಬಹುನಿರೀಕ್ಷಿತ 'ಜನೋತ್ಸವ' ಮತ್ತೆ ಮುಂದೂಡಿಕೆ

  • ಮತ್ತೆ ಮುಂದಕ್ಕೆ ಹೋದ 'ಜನೋತ್ಸವ' 
  • ಗೌರಿ ಗಣೇಶ ಹಬ್ಬದ ನೆಪದಿಂದ ಮುಂದೂಡಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶವಾಗಿ ನೆರವೇರಬೇಕಾಗಿದ್ದ ಬಿಜೆಪಿಯ 'ಜನೋತ್ಸವ' ಮತ್ತೆ ಮುಂದಕ್ಕೆ ಹೋಗಿದೆ. 

ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಸರ್ಕಾರದ ಸಾಧನಾ ಸಮಾವೇಶವನ್ನೇ ಪಕ್ಷದ ಬಲಪ್ರದರ್ಶನ ವೇದಿಕೆಯನ್ನಾಗಿಸಿಕೊಳ್ಳುವ ಬಿಜೆಪಿ ಲೆಕ್ಕಾಚಾರ ಅದು ಏಕೋ ಸಮರ್ಪಕವಾಗಿ ಕೈಗೂಡುತ್ತಿಲ್ಲ.

ಈ ಹಿಂದಿನ ಲೆಕ್ಕಾಚಾರದಂತೆ ಆಗಸ್ಟ್‌ 28ಕ್ಕೆ ಸರ್ಕಾರದ 'ಜನೋತ್ಸವ' ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಸರ್ಕಾರದ ವತಿಯಿಂದ ಮಾಡಲಾಗಿತ್ತು. ಆದರೆ, ಕೆಲವು ಕಾರಣಗಳಿಂದ 'ಜನೋತ್ಸವ' ಮತ್ತೆ ಮುಂದಕ್ಕೆ ಹೋಗಿದೆ. ಸೆಪ್ಟಂಬರ್‌ 11ಕ್ಕೆ ದೊಡ್ಡಬಳ್ಳಾಪುರದಲ್ಲೇ 'ಜನೋತ್ಸವ' ಕಾರ್ಯಕ್ರಮ ನಡೆಸಲು ಸರ್ಕಾರ ಮುಂದಾಗಿದೆ.

ಈ ಸುದ್ದಿ ಓದಿದ್ದೀರಾ?: ರಾಜ್ಯದ ಐದು ಕಡೆ ʼಜನೋತ್ಸವʼ ಮಾಡುತ್ತೇವೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜನೋತ್ಸವ ಮುಂದಕ್ಕೆ ಹೋಗುತ್ತಿರುವುದಕ್ಕೆ ತಿಂಗಳಾಂತ್ಯದಲ್ಲಿ ಬರಲಿರುವ ಗೌರಿ ಗಣೇಶ ಹಬ್ಬ ಕಾರಣ ಎಂದು ಮುಖ್ಯಮಂತ್ರಿಗಳ ಆಪ್ತ ಸಿಬ್ಬಂದಿ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ. ಆದರೆ, ವಿಪಕ್ಷಗಳ ಪ್ರಕಾರ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದ್ದು ಈ ಸಲುವಾಗಿ ಕಾರ್ಯಕ್ರಮವನ್ನು ತಡವಾಗಿಸಲಾಗುತ್ತಿದೆಯಂತೆ.

ನಿಮಗೆ ಏನು ಅನ್ನಿಸ್ತು?
0 ವೋಟ್