'ಬೊಮ್ಮಾಯಿ ಮಾಡೆಲ್‘ ಅಂದ್ರೆ ಸ್ವಪಕ್ಷೀಯರಿಂದಲೇ ಆಕ್ರೋಶಕ್ಕೆ ಒಳಗಾಗುವ ಆಡಳಿತ: ಕಾಂಗ್ರೆಸ್ ಟೀಕೆ

  • ಬಿಜೆಪಿ ವಿರುದ್ಧ ಟೀಕೆ ನಡೆಸಿದ ಕಾಂಗ್ರೆಸ್
  • ಸೊಗಡು ಶಿವಣ್ಣ ಹೇಳಿಕೆ ಬಗ್ಗೆ ಕಾಂಗ್ರೆಸ್ ಟ್ವೀಟ್‌  

ಬಿಜೆಪಿ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಸ್ವಪಕ್ಷದ ವಿರುದ್ಧ ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, ಇದನ್ನು 'ಬೊಮ್ಮಾಯಿ ಮಾಡೆಲ್' ಎಂದು ಟೀಕಿಸಿದೆ. 

"ಹಿಂದೂಗಳ ಹತ್ಯೆ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದು ಸೊಗಡು ಶಿವಣ್ಣ ಗುರುವಾರ ಆರೋಪಿಸಿದ್ದರು. "ದೇಶದಲ್ಲಿ ಅಗೋಚರ ಯುದ್ಧ ಆರಂಭವಾಗಿದೆ. ದುಷ್ಟ ಶಕ್ತಿಗಳು ಕಾನೂನು ಕೈಗೆ ತೆಗೆದುಕೊಂಡಿವೆ. ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಯುದ್ಧ ಸಾರಿವೆ. ಇಂತಹ ಭಯ, ಆತಂಕದ ವಾತಾವರಣ ಸೃಷ್ಟಿಯಾಗಿದ್ದರೂ ಇದನ್ನು ತಡೆಯುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿಲ್ಲ" ಎಂದು ಶಿವಣ್ಣ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು.

ಈಗ ಇದೇ ವಿಚಾರದ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬಿಜೆಪಿ ಆಡಳಿತವನ್ನು ಟೀಕಿಸಿದೆ.

'ಮಾಜಿ ಸಚಿವ ಸೊಗಡು ಶಿವಣ್ಣ ಅವರು ಈ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯ, ಶೇ 40 ಕಮಿಷನ್ ಭ್ರಷ್ಟಾಚಾರ, ಸ್ವಪಕ್ಷದ ಜನಪ್ರತಿನಿಧಿಗಳ ದುರಾಡಳಿತದ ಬಗ್ಗೆ ಆಡಿದ ಮಾತಿಗೆ ಬಿಜೆಪಿ ಸರ್ಕಾರ ಏನು ಹೇಳುತ್ತದೆ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸ್ವಪಕ್ಷೀಯರಿಂದಲೇ ಆಕ್ರೋಶಕ್ಕೆ ಒಳಗಾಗುವಂತಹದ್ದು 'ಬೊಮ್ಮಾಯಿ ಮಾಡೆಲ್' ಅಡಳಿತ ಎಂದು ಕಾಂಗ್ರೆಸ್‌ ಬಿಜೆಪಿಯನ್ನು ಕುಟುಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್