ಬಿಜೆಪಿ ಬಿಟ್ಟ ಬಿ ಎಸ್‌ ಯಡಿಯೂರಪ್ಪ ಆಪ್ತ ಯು ಬಿ ಬಣಕಾರ್: ಮುಂದೇನು?

U B Banakar
  • ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಯು ಬಿ ಬಣಕಾರ್
  • ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದೆಂದರೆ ರಾಜಕೀಯದಿಂದ ದೂರವಾದಂತೆ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕ ಯು ಬಿ ಬಣಕಾರ ಬಿಜೆಪಿ ತೊರೆದಿದ್ದಾರೆ. 

ಬುಧವಾರ ಸಂಜೆ ಪಕ್ಷ ತೊರೆಯುವ ನಿರ್ಧಾರ ಪಕ್ರಟಿಸಿರುವ ಅವರು, ಬಿಜೆಪಿ ಪ್ರಾಥಮಿಕ ಸದಸ್ಯತ್ವದ ಜೊತೆಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡುವ ವೇಳೆ ಬಣಕಾರ್ ತಮ್ಮ ಬೆಂಬಲಿಗರಿಗೆ ಪತ್ರ ಬರೆದು ಭಾವನಾತ್ಮಕ ಸಂದೇಶ ನೀಡಿದ್ದಾರೆ. 

"ಕೆಲವೊಂದು ಸಂದರ್ಭಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ಇಂದಿನ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ನಿರ್ಧಾರ ತೆಗೆದುಕೊಳ್ಳುವ ಕಾಲ ಕೂಡಿ ಬಂದಿದೆ. ತಮ್ಮೆಲ್ಲರ ಸಹಕಾರ ಸದಾ ಇರಲಿ" ಎಂದು ಅವರು ಕೇಳಿಕೊಂಡಿದ್ದಾರೆ.  

AV Eye Hospital ad

ಇನ್ನು ತಮ್ಮ ರಾಜೀನಾಮೆ ವಿಚಾರದ ದೃಢ ನಿರ್ಧಾರದ ಬಗೆಗೂ ಹೇಳಿಕೊಂಡಿರುವ ಅವರು, "ನಾನು ಈ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಈ ನಿರ್ಧಾರದಿಂದ ಹಿಂದೆ ಸುಯಬೇಕಾದರೆ ರಾಜಕಾರಣವನ್ನೇ ಬಿಡಬೇಕು" ಎಂದಿದ್ದಾರೆ.

ಇದನ್ನು ಓದಿದ್ದೀರಾ: ಬೆಂಗಳೂರಿಗೆ ಪ್ರಧಾನಿ ಮೋದಿ: ಯಾವ ಯಾವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಂಚಾರ ನಿರ್ಬಂಧ? ಇಲ್ಲಿದೆ ಮಾಹಿತಿ        

ಬಣಕಾರ ಅವರು 1994ರಲ್ಲಿ ಶಾಸಕರಾಗುವ ಮೂಲಕ ಹಾವೇರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ಕೊಡಿಸಿದ್ದರು.  

ಯಡಿಯೂರಪ್ಪ ನಿಷ್ಠರಾಗಿದ್ದ ಬಣಕಾರ್ ಸದಾ ಅವರೊಂದಿಗೇ ಗುರುತಿಸಿಕೊಂಡಿದ್ದರು. ಅದರ ಫಲವಾಗಿ ಬಿಎಸ್‌ವೈ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರೊಂದಿಗೆ ಕೆಜೆಪಿ ಸೇರಿ, 2013ರಲ್ಲಿ ಕೆಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮರಳಿ ಬಿಎಸ್‌ವೈ ಬಿಜೆಪಿ ಸೇರಿದಾಗಲೂ ಅವರನ್ನು ಹಿಂಬಾಲಿಸಿ ಕಮಲ ಹಿಡಿದಿದ್ದರು. 

2018ರ ಚುನಾವಣೆವರೆಗೂ ತಮ್ಮ ಪಾರಮ್ಯ ಮೆರೆದಿದ್ದ ಬಣಕಾರ್ ಆ ಸಾಲಿನ ಚುನಾವಣೆಯಲ್ಲಿ ಬಿ.ಸಿ.ಪಾಟೀಲ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ 2019ರಲ್ಲಿ ಬಿ.ಸಿ.ಪಾಟೀಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದಾಗ ಅವರ ಪರವಾಗಿ ಪ್ರಚಾರ ಮಾಡಿ ಗಮನ ಸೆಳೆದಿದ್ದೂ ಅಲ್ಲದೆ ತಮ್ಮ ಪಕ್ಷನಿಷ್ಠೆ ಪ್ರದರ್ಶಿಸಿದ್ದರು. 

ಯು ಬಿ ಬಣಕಾರ್ ಪಕ್ಷ ನಿಷ್ಠೆಗಾಗಿ ಬಿಜೆಪಿ ಅವರಿಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರ ಸ್ಥಾನ ನೀಡಿತ್ತು. 

ಹೀಗಿದ್ದ ಬಣಕಾರ್ ಈಗ ಏಕಾಏಕಿ ಪಕ್ಕದಿಂದ ದೂರ ಸರಿಯುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ಅವರು ಜೆಡಿಎಸ್ ಸಖ್ಯ ಬೆಳೆಸುವ ವದಂತಿಯೂ ಹರಿದಾಡುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app