ಸಿ ಟಿ ರವಿ ಕಮ್ಯುನಲ್ ಫೆಲೋ, ಅವನಿಗೆಲ್ಲಾ ನಾನು ಉತ್ತರ ಕೊಟ್ಟುಕೊಂಡು ಕೂರಲ್ಲ: ಸಿದ್ದರಾಮಯ್ಯ

SIDDARAMAIAH PC
  • ಅಭ್ಯರ್ಥಿ ಆಯ್ಕೆ ವೇಳೆ ಸಾಮಾಜಿಕ ನ್ಯಾಯದ ಜೊತೆ ಗೆಲುವಿನ ಸಾಧ್ಯತೆ ಪರಿಗಣಿಸಬೇಕು
  • ಸಿ ಟಿ ರವಿಗೆ ಜಾತ್ಯಾತೀತ ತತ್ವ, ಸಂವಿಧಾನ ಎರಡೂ ಅರ್ಥವಾಗುವುದಿಲ್ಲ: ಸಿದ್ದರಾಮಯ್ಯ

"ಸಿ ಟಿ ರವಿ ಇದ್ದಾನಲ್ಲಾ ಅವನೊಬ್ಬ ಕಮ್ಯುನಲ್ ಫೆಲೋ, ಅವನಿಗೆಲ್ಲಾ ನಾನು ಉತ್ತರ ಕೊಡಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಲೆ ಸುಲಿಗೆ ಜಾಸ್ತಿಯಾಗತ್ತದೆ ಎಂದು ಸಿ ಟಿ ರವಿ ಹೇಳಿದ್ದಾನಂತೆ, ಅವನಿಗೆ ಏನು ಗೊತ್ತು ಅಂತ ಅವನ ಬಗ್ಗೆ ಮಾತನಾಡಲಿ, ಹಿ ಈಸ್ ಎ ಮೋಸ್ಟ್ ಕಮ್ಯುನಲ್ ಫೆಲೋ. ಅವನಿಗೆ ಜಾತ್ಯಾತೀತ ತತ್ವ ಅರ್ಥವಾಗಲ್ಲ. ಸಂವಿಧಾನ ಅವನಿಗೆ ಅರ್ಥವಾಗಲ್ಲ. ಅವನಿಗೆ ನಾನು ಉತ್ತರ ಕೊಡುತ್ತಾ ಕೂರಲ್ಲ” ಎಂದರು.

Eedina App

ಚುನಾವಣಾ ಸ್ಪರ್ಧೆ ವಿಚಾರವಾಗಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, "ನನ್ನ ಸ್ಪರ್ಧೆಗೆ ಬೇರೆ ಬೇರೆ ಕ್ಷೇತ್ರಗಳಿಂದ ಆಹ್ವಾನ ಬರುತ್ತಿದೆ. ಜನ ಕರೆಯುತ್ತಿದ್ದಾರೆ. ನಾನೂ ಅರ್ಜಿ ಹಾಕಿದ್ದೇನೆ. ಸ್ಪರ್ಧಾ ಕ್ಷೇತ್ರದ ಆಯ್ಕೆಯನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಅವರು ಹೇಳಿದ ಜಾಗದಲ್ಲೇ ಸ್ಪರ್ಧೆ ಮಾಡುತ್ತೇನೆ" ಎಂದರು.

"ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವುನ್ನೂ ಪರಿಗಣನೆ ಮಾಡಬೇಕಾಗುತ್ತದೆ. ಕೋಮುವಾದಿ, ಮನುವಾದಿ ಪಕ್ಷವನ್ನು ಕಿತ್ತು ಹಾಕಬೇಕಾದ ಗುರಿ ನಮ್ಮ ಮುಂದಿದೆ. ಹೀಗಾಗಿ ಟಿಕೆಟ್ ಯಾರಿಗೆ ಸಿಗುತ್ತದೆ, ಸಿಗುವುದಿಲ್ಲ ಎನ್ನುವುದು ಈಗ ಪ್ರಶ್ನೆ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಟಿಕೆಟ್ ಕೊಟ್ಟ ಅಭ್ಯರ್ಥಿ ಪರ ಕೆಲಸ ಮಾಡುವಂತಾಗಬೇಕು" ಎಂದು ಸಿದ್ದರಾಮಯ್ಯ ಹೇಳಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ? : ಸರ್ಚ್ ವಾರೆಂಟ್‌ನಲ್ಲಿರೋ ರೌಡಿ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿಯೇ? ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

"ಕೊಪ್ಪಳದಲ್ಲಿ ಟಿಕೆಟ್ ಆಕಾಂಕ್ಷಿಗಳ ಹೆಸರು ಹೇಳಿದ್ದೇನೆಯೇ ಹೊರತು; ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮದುವೆ ಸಮಾರಂಭದಲ್ಲಿ ರಾಜಕೀಯದ ಬಗ್ಗೆ ಮಾತನಾಡಲು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ನಾನು ಕೆಲವರ ಹೆಸರು ಹೇಳಿದೆ ಅಷ್ಟೇ.." ಎಂದು ಸಿದ್ದರಾಮಯ್ಯ ಟಿಕೆಟ್‌ ಘೋಷಿಸಿದ್ದಾರೆ ಎಂಬ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app