ಎಸಿಬಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್

Zameer ahmed
  • ಶನಿವಾರ ಎಸಿಬಿ ಕಚೇರಿ ವಿಚಾರಣೆಗೆ ಬಂದ ಜಮೀರ್‌ ಅಹ್ಮದ್ ಖಾನ್
  • ಅಕ್ರಮ ಸಂಪತ್ತಿನ ಸಂಗ್ರಹ, ಅಗತ್ಯ ವ್ಯಾವಹಾರಿಕ ಮಾಹಿತಿ ಒದಗಿಸದ ಆರೋಪ

ಅಕ್ರಮ ಸಂಪತ್ತಿನ ಸಂಗ್ರಹ ಹಾಗೂ ವ್ಯಾವಹಾರಿಕ ಮಾಹಿತಿ ಒದಗಿಸುವ ವಿಚಾರದಲ್ಲಿನ ವಿಳಂಬದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ಒಳಪಟ್ಟಿದ್ದ ಶಾಸಕ ಜಮೀರ್‌ ಅಹ್ಮದ್‌ ಇಂದು (ಶನಿವಾರ) ಇಲಾಖಾ ವಿಚಾರಣೆಗೆ ಹಾಜರಾದರು. ಬೆಂಗಳೂರಿನ ಎಸಿಬಿ ಕಚೇರಿಗೆ ಬಂದ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌ಖಾನ್ ಅಧಿಕಾರಿಗಳ ಪ್ರಶ್ನಾವಳಿಗಳನ್ನೆದುರಿಸಿದರು.

ಜಾರಿ ನಿರ್ದೇಶನಾಲಯದ ವರದಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದರನ್ವಯ ಜುಲೈ 5ರಂದು ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ಬೆಂಗಳೂರಿನ ರೈಲ್ವೆ ಕಂಟೋನ್ಮೆಂಟ್ ಬಳಿಯಿರುವ ಮನೆ, ಕಲಾಸಿಪಾಳ್ಯದಲ್ಲಿ ಇರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್ ಮತ್ತು ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ಸುದ್ದಿ ಓದಿದ್ದೀರಾ? : ಪದೇ ಪದೆ ಜಮೀರ್‌ ಮೇಲೆ ಯಾಕೆ ಐಟಿ, ಎಸಿಬಿ ದಾಳಿ?

ಕಳೆದ ವರ್ಷವೂ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ಐಟಿ ಮತ್ತು ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿದ್ದರು. ಜಮೀರ್ ಅಹ್ಮದ್ ಅವರು ಕೋಟ್ಯಂತರ ಮೌಲ್ಯದ ಭವ್ಯವಾದ ಮನೆ ಕಟ್ಟಿರುವುದರ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಅದರ ಆದಾಯದ ಮೂಲ ಯಾವುದು ಎಂದು ಪರಿಶೀಲಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್